ಸೋಮವಾರಪೇಟೆ, ಡಿ. 22: ಸಮೀಪದ ಕಲ್ಕಂದೂರು ಕೂಡುರಸ್ತೆಯ ಶ್ರೀ ಶಾಸ್ತ ಯುವಕ ಸಂಘದಿಂದ ಜ. 1 ರಂದು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಮೂರನೇ ವರ್ಷದ ಮಂಡಲ ಪೂಜೋತ್ಸವ ಆಯೋಜಿಸಲಾಗಿದೆ.
ಜ. 1 ರಂದು ಬೆಳಿಗ್ಗೆ 6.30ಕ್ಕೆ ಕಲ್ಕಂದೂರು ಗ್ರಾಮ ದೇವತೆ ಹಾಗೂ ವನ ದೇವತೆಗಳಿಗೆ ಪೂಜೆ, 9 ಗಂಟೆಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮ, ವಿಶೇಷ ಪೂಜೆ, ಮಧ್ಯಾಹ್ನ ಅನ್ನದಾನ, ಸಂಜೆ 3.30ಕ್ಕೆ ಕೇರಳದ ಚಂಡೆವಾದ್ಯ ಹಾಗೂ ಕಲಶದೊಂದಿಗೆ ಅಯ್ಯಪ್ಪ ಸ್ವಾಮಿ ವಿಗ್ರಹದ ಮೆರವಣಿಗೆ, ಸಂಜೆ 6 ಗಂಟೆಗೆ ದೀಪಾರತಿ, ರಾತ್ರಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.
ಶ್ರಮದಾನ: ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಕಲ್ಕಂದೂರು ಗ್ರಾಮದ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಪದಾಧಿಕಾರಿಗಳು ಶ್ರಮದಾನ ನಡೆಸಿದರು. ಭಜನಾ ಮಂದಿರದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.