ಸೋಮವಾರಪೇಟೆ: ಹೋಪ್ ಫೌಂಡೇಷನ್‍ನಿಂದ ತಾಲೂಕಿನ ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಕೊಡೆ, ಸ್ವೆಟ್ಟರ್ ಮತ್ತು ಪಾದರಕ್ಷೆಗಳನ್ನು ವಿತರಿಸಲಾಯಿತು.
ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫೌಂಡೇಷನ್‍ನ ಸಂಯೋಜಕ ರೀಗನ್, ವಿವಿನ್ ಕೊರಿಯ, ಭರತ್ ಅವರುಗಳು ವಿದ್ಯಾರ್ಥಿಗಳಿಗೆ ಪರಿಕರಗಳನ್ನು ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಮಜೀದ್, ಪಿಡಿಓ ಮಧು, ಕಾರ್ಯದರ್ಶಿ ವಿಶ್ವನಾಥ್, ಎಸ್‍ಡಿಎಂಸಿ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷೆ ಸವಿತ, ಮುಖ್ಯೋಪಾಧ್ಯಾಯಿನಿ ಶೋಭ, ಜ್ಞಾನೇಶ್ವರಿ, ಪೊನ್ನಮ್ಮ, ಚಂದ್ರಮತಿ ಅವರುಗಳು ಉಪಸ್ಥಿತರಿದ್ದರು.
ಶ್ರೀಮಂಗಲ: ಪ್ರಸಕ್ತ ವರ್ಷ ಉತ್ತರ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ ಹಾಗೂ ಇದರಿಂದ ಸಂತ್ರಸ್ತರಾದ ಜನರಿಗೆ ಶ್ರೀಮಂಗಲ ವಿದ್ಯಾಸಂಸ್ಥೆ ಮಿಡಿದಿದೆ. ವಿಜೃಂಭಣೆಯ ಕಾಲೇಜು ವಾರ್ಷಿಕೋತ್ಸವವನ್ನು ಕೈಬಿಟ್ಟು ಈ ಬಾರಿ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕೇವಲ ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಮದ್ರೀರ ಎಂ. ವಿಷ್ಣು ಅವರು ವಹಿಸಿಕೊಂಡು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಶಿಸಿದರು. ಪ್ರಾಂಶುಪಾಲ ಕೋಟ್ರಂಗಡ ಎಂ. ಚಂಗಪ್ಪ ಪ್ರಾಸ್ತಾವಿಕ ನುಡಿಯಾಡಿದರು.
ಉಪಾಧ್ಯಕ್ಷ ಮಚ್ಚಾಮಾಡ ಬಿ. ಸುಬ್ರಮಣಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಿಕ್ಷಣ ಸಂಸ್ಥೆ, ಶಿಕ್ಷಕರಿಗೂ ಹಾಗೂ ಸಮಾಜಕ್ಕೂ, ಪೋಷಕರಿಗೂ ಒಳ್ಳೆಯ ಹೆಸರು ತರಲಿ ಎಂದು ಹಾರೈಸಿದರು.
ಕಾರ್ಯದರ್ಶಿ ಕಟ್ಟೇರ ಸುಶೀಲ ಅಚ್ಚಪ್ಪ ಅವರು ವಿದ್ಯಾರ್ಥಿ ಜೀವನ ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣ ಹಾಗೂ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ, ಶೈಕ್ಷಣಿಕ ಪ್ರವಾಸ ಇವೆಲ್ಲವೂ ಇದ್ದರೆ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು - ಆಸಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ಮಂದಮಾಡ ಗಣೇಶ್, ಕಂಞಂಗಡ ರಮೇಶ್, ಮಚ್ಚಮಾಡ ಸುಮಂತ್, ಕಳ್ಳಂಗಡ ರಜಿತ್ ಪೂವಣ್ಣ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರತ್ನಮ್ಮ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಚಟ್ಟಂಗಡ ಸುನಿತಾ ಕಿರಣ್ ಹಾಜರಿದ್ದರು. ಪನ್ನ ಸ್ವಾನತಿಸಿ, ನಾಗೇಶ್ ವಂದಿಸಿದರು.
ಒಡೆಯನಪುರ: ಹಾಸನದ ನ್ಯಾಷಿನಲ್ ಶೀಟೋಕಾಸ್ ಕರಾಟೆ ಮಲ್ಟಿ ಪರ್‍ಪಸ್ ಪೆಡರೇಷನ್ ವತಿಯಿಂದ ನಡೆಸಲಾದ ಕರಾಟೆ ಬ್ಲಾಕ್ ಬೆಲ್ಟ್ ಅವಾರ್ಡಿಂಗ್‍ನಲ್ಲಿ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಟಿ.ಆರ್. ತರುಣ್, ಎನ್.ಡಿ. ಪೂಜಿತ್, ಎನ್.ಎಲ್. ಯುವರಾಜ್, ಎಸ್.ಸಿ. ದ್ರುವಂತ್, ಪಿ.ಡಿ. ಸಾತ್ವಿಕ್, ವಿಶ್ಮಯ್ ಪಿ. ಗೌಡ, ಡಿ. ಶುದ್ವಿಕ್‍ಗೌಡ, ಎಂ.ಯು. ಗೌತಮ್, ವಿ.ಎಸ್. ಅನೀಶ್ ಇವರುಗಳು ಕರಾಟೆ ಬ್ಲಾಕ್ ಬೆಲ್ಟ್ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೆ ಕರಾಟೆ, ಯೋಗ ಮುಂತಾದ ವ್ಯಾಯಾಮಗಳನ್ನು ಕರಗತ ಮಾಡಿಕೊಂಡರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಢತೆ ಸುಧಾರಣೆಯಾಗುತ್ತದೆ ಎಂದರು.
ಈ ಸಂದರ್ಭ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ಕರಾಟೆ ತರಬೇತುದಾರ ಸೆನ್‍ಸಾಯ್ ಪರಮೇಶ್ ಮುಂತಾದವರಿದ್ದರು.
ಬೆಕ್ಕೆಸೊಡ್ಲುರು: ಬೆಕ್ಕೆಸೊಡ್ಲುರು ಸಮೀಪದ ಶಾರದಾ ಪ್ರಾಥಮಿಕ ಶಾಲೆಗೆ ಮತ್ತು ಕಾವೇರಿ ಕಾಲೋನಿ ಜನರಿಗೆ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇದನ್ನು ಆಲಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ರೂ. 13 ಲಕ್ಷದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಓವೇರೆಲ್ ಟ್ಯಾಂಕ್‍ಗೆ ಚಾಲನೆ ನೀಡಿದರು.
ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಕಾಟೀಮಾಡ ಜಿಮ್ಮಿ ಅಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪ, ಸಿದ್ದು ನಾಚಪ್ಪ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಾಪೆÇೀಕ್ಲು: ಪ್ರಸ್ತುತ ಯುವ ಜನಾಂಗ ದುಶ್ಚಟಗಳತ್ತ ಮಾರು ಹೋಗುತ್ತಿರುವದು ಆತಂಕಕಾರಿ ಅಂಶ ಎಂದು ನಿವೃತ್ತ ಪ್ರಾಂಶುಪಾಲ ಪೂಣಚ್ಚ ಅವರು ವಿಷಾಧ ವ್ಯಕ್ತಪಡಿಸಿದರು. ಅವರು ಸ್ಥಳೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ವಾರ್ಷಿಕೊತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಾನಸಿಕ ಸ್ಥಿತಿಯನ್ನು ಸೀಮಿತವಾಗಿಟ್ಟುಕೊಳ್ಳಬೇಕೆಂದ ಅವರು, ಇದರಿಂದ ಮಾತ್ರ ಓದಿನಲ್ಲಿ ಮುಂದುವರೆಯಲು ಸಾಧ್ಯ ಎಂದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತೆ ಶಿಸ್ತಿನ ಮನುಷ್ಯರಾಗಬೇಕೆಂದು ಕಿವಿಮಾತು ಹೇಳಿದರು.
ಅತಿಥಿಯಾಗಿ ಆಗಮಿಸಿದ ಅರೆಯಡ ಡಿ. ಸೋಮಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿ.ಯು.ಸಿ. ಜೀವನದ ಒಂದು ಕಾಲ ಘಟ್ಟ. ಈ ಸಮಯ ಅವನ ಮುಂದಿನ ಭವಿಷ್ಯದ ಬುನಾದಿಯ ಸಮಯವಾಗಿದ್ದು, ಪ್ರತಿಯೊಬ್ಬರು ಚೆನ್ನಾಗಿ ಓದಿ ಬುದ್ಧಿವಂತ ಎಂದು ಎನ್ನಿಸಿಕೊಂಡು ಶಾಲೆಗೆ, ಶಿಕ್ಷಕರಿಗೆ, ತಂದೆ ತಾಯಿಯರಿಗೆ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ, ಸರಕಾರಿ ಶಾಲೆಯಲ್ಲಿ ಉತ್ತ,ಮ ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿನ ಉಪನ್ಯಾಸಕರು ನುರಿತ ತರಬೇತಿಯನ್ನು ಪಡೆದವರಾಗಿದ್ದು ಇದರಿಂದ ಕಳೆದ ಮೂರು ವರ್ಷಗಳಿಂದ ಶಾಲೆಗೆ ಉತ್ತಮ ಫಲಿತಾಂಶ ಬರುತ್ತಿದೆ ಎಂದರು.
ವೇದಿಕೆಯಲ್ಲಿ ಪ್ರಬಾರ ಪ್ರಾಂಶುಪಾಲೆ ಶ್ರೀಲತ, ಸಿ.ಡಿ.ಸಿ. ಸದಸ್ಯರಾದ ಕೊಂಬಂಡ ಗಣೇಶ್, ಕೆ.ಎಂ. ರಮೇಶ್, ಹೇಮಾ, ಸರಿತಾ, ಶಿಕ್ಷಕರಾದ ಕೆ.ಎಂ. ರೀಟಾ, ಸರಳ, ಅವನಿಜಾ, ಪಿ.ವಿ. ಮಂಜುನಾಥ, ಮುತ್ತಪ್ಪ, ಪೂಣಚ್ಚ, ಅಶ್ವಿನಿ, ರಹಮಾತ್, ವಿದ್ಯಾರ್ಥಿ ನಾಯಕ ಚೇತನ್, ನಾಯಕಿ ತಂಗಮ್ಮ, ಮತ್ತಿತರರು ಇದ್ದರು.
ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟವನ್ನು ನಡೆಸಲಾಯಿತು.
ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಘವ ಅವರು ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನದ ಉದ್ದೇಶಗಳನ್ನು ಈಡೇರಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಕೆ.ಟಿ. ಪರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಬೇಕು. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.
ಕಾಲೇಜಿನ ಸ್ಪಂದನ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕ ಲಿಂಗರಾಜು, ಕಾರ್ಯದರ್ಶಿ ಸಿ.ಕೆ. ಗಣಪತಿ, ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ರಾಮಚಂದ್ರ, ಪಾಪಯ್ಯ, ರಾಜಪ್ಪ ಹೆಚ್.ಪಿ., ಸಂಚಾಲಕ ಕೆ.ಎನ್. ಜಗದೀಶ್ ಮತ್ತು ಕಾಲೇಜಿನ ಕ್ರೀಡಾ ಸಂಯೋಜಕ ಎನ್.ಕೆ. ಮನು, ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್. ಶರಣ್ ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಪ್ರಪಂಚ ಜ್ಞಾನ, ಉತ್ತಮ ಗುಣ ನಡತೆ, ಮಾನವೀಯತೆಯನ್ನು ವಿದ್ಯಾರ್ಥಿಗಳು ಈಗಿನಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಕಾಫಿ ಬೆಳೆಗಾರ ಡಾ. ಜಗನ್ನಾಥ್ ಶೆಣೈ ಕಿವಿಮಾತು ಹೇಳಿದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿಯ ಶಾಲಾ ವಾರ್ಷಿಕೋತ್ಸವದಲ್ಲಿ ತಾನು ಓದಿದ ಶಾಲೆಯನ್ನು ಮರೆಯ ಬಾರದೆಂದೂ ಅವರು ಹೇಳಿದರು. ರಾಷ್ಟ್ರೀಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರುಳೀಧರ್, ಸುಂಟಿಕೊಪ್ಪ ಹೋಬಳಿ ಕೊಡಗಿನ ಗೌರಮ್ಮ ಅಂತರರಾಷ್ಟ್ರೀಯ ಹಾಕಿಪಟು ಮೊಳ್ಳೇರ ಗಣೇಶ, ಟೆನ್ನಿಸ್ ತಾರೆ ರೋಹನ್ ಬೋಪಣ್ಣ, ವೇಣು ಉತ್ತಪ್ಪ ಅವರಗಳನ್ನು ನೀಡಿದ ಈ ಊರು ದೀಮಂತ ವ್ಯಕ್ತಿಗಳ ನಾಡಾಗಿದೆ ಎಂದೂ ಹೇಳಿದರು.
ಅಧ್ಯಕ್ಷತೆಯನ್ನು ಗೌರವ ಕಾರ್ಯದರ್ಶಿ ಕೆ.ಎಸ್. ಮಂಜುನಾಥ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಹೆಚ್.ಡಿ. ಮಣಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗುವದು, ವಿದ್ಯಾರ್ಥಿಗಳು ವಿದ್ಯೆಯಲ್ಲಿ ಅಸಕ್ತಿ ವಹಿಸಿ ಉತ್ತಮ ಫಲಿತಾಂಶ ತರಬೇಕೆಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಎಸ್.ಬಿ. ಶಂಕರ್, ಆರ್‍ಎಫ್‍ಓ ಮಂಡುವಂಡ ಎಸ್. ಚಂಗಪ್ಪ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ, ಶಾಲಾಭಿವೃದ್ಧಿ ಉಪಾಧ್ಯಕ್ಷೆ ಮೀನಾ ಸೋಮಯ್ಯ, ಕಾಫಿ ಬೆಳೆಗಾರ ಹರೀಶ್ ಫೈ, ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಡಾ. ಜಗನ್ನಾಥ್ ಶೆಣೈ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ, ಗೌರವಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿ, ಶೋಭಾ ದಾಸ್ ವಂದಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಪೋಷಕರ ಮನ ರಂಜಿಸಿತು.
ಕೂಡಿಗೆ: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯವನ್ನು ತುಂಬಲು ಪೋಷಕರು ವಿದ್ಯಾಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಾಲ್ಟರ್ ಹಿಲರಿ ಡಿಮೆಲ್ಲೋ ಹೇಳಿದ್ದಾರೆ.
ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜ್ಞಾನ ಬೆಳವಣಿಗೆಗೆ ಓದು ಎಷ್ಟು ಮುಖ್ಯವೋ, ಅದೇ ರೀತಿ ಸತ್ಕಾರದ ಅರಿವು ಅಷ್ಟೇ ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೂಡಿಗೆಯ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರು ಡಿ ಕುನ್ಹಾ ಅವರು ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಯುತವಾದ ಭೋದನೆಗಳನ್ನು ಅರಿತು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಅರ್ಸುಲೈನ್ ಫ್ರಾನ್ಸಿಸ್ಕನ್ ವಿದ್ಯಾ ಮಂಡಳಿಯ ಉಪಕಾರ್ಯದರ್ಶಿ ಸಿಸ್ಟರ್ ಲಿಲ್ಲಿ ರೋಡ್ರಿಗಸ್ ವಹಿಸಿದ್ದರು. ನಂತರ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಗ್ರಾ.ಪಂ. ಸದಸ್ಯರುಗಳಾದ ಕೆ.ಜೆ. ಮೋಹಿನಿ, ರತ್ನಮ್ಮ, ಕೂಡಿಗೆ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಮುಬೀನಾ ಕೌಸರ್, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ್ ಕ್ಯಾಸ್ಟಲೀನೋ, ಶಿಕ್ಷಕ ರಕ್ಷಕ ಸಂಘದ ನಿರ್ದೇಶಕ ಕೆ.ಕೆ. ನಾಗರಾಜ್ ಶೆಟ್ಡಿ, ಕೆ.ಆರ್. ಜಗದೀಶ್, ರಾಮೇಗೌಡ, ಕುಮಾರ್, ಮಹಮ್ಮದ್, ನೀಲಮ್ಮಾ, ರೇಖಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.ಕೂಡಿಗೆ: ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ 26ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೂಡಿಗೆಯ ಆಂಜೆಲಾ ವಿದ್ಯಾಸಂಸ್ಥೆಯ ವಿಧ್ಯಾರ್ಥಿನಿ ಹೆಚ್.ಎಸ್. ತೇಜನಾ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.
ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ 26ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ‘ಜೈವಿಕ ಪ್ಲಾಸ್ಟಿಕ್ ಬಳಕೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಮಂಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಂಜೆಲಾ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿಧ್ಯಾರ್ಥಿನಿಯಾಗಿದ್ದು, ಹೆಬ್ಬಾಲೆಯ ಹುಲಸೆ ಗ್ರಾಮದ ಶೇಖರ್ ಹಾಗೂ ಜ್ಯೋತಿ ದಂಪತಿಗಳ ಪುತ್ರಿ.
ಮಡಿಕೇರಿ: ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರ ಅನುದಾನದಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥಾಪಕರ ದಿನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ತಾ. 24 ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಖಜಾಂಚಿ ಡಾ. ಸಿ.ಆರ್. ಉದಯಕುಮಾರ್ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅಂದು ಬೆಳಿಗ್ಗೆ 11 ಗಂಟೆಗೆ ಕಟ್ಟಡವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಸ್. ಚಂದ್ರಮೌಳಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಎಂ.ಸಿ. ನಾಣಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಮಾಜಿ ಸಚಿವÀ ಬಿ.ಎ. ಜೀವಿಜಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೈಗಾರಿಕೋದ್ಯಮಿ ಹರ್‍ದೀಪ್ ರಾಲ್ಫ್ ಸಹಾನಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮ್‍ನಾಥ್ ಹಾಗೂ ಡಾ. ಎ.ಎಸ್. ಅಶೋಕ್ ಅವರನ್ನು ಸನ್ಮಾನಿಸಲಾಗುವದು. ಅಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿರುವ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಜಯಮಾಲ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಚಲನಚಿತ್ರ ನಟ ಜೈಜಗದೀಶ್ ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರ ವಿ.ಎಸ್. ವಿನಯ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಕಲಾವಿದರಾದ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ಸ್ ಸಿದ್ದರಾಮ ಕೇಸಾಪುರ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಸಿ.ಆರ್. ಉದಯಕುಮಾರ್ ಮಾಹಿತಿ ನೀಡಿದ್ದಾರೆ.
ವೀರಾಜಪೇಟೆ: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವ ವಿದ್ಯಾನಿಲಯ ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುವರ್ಣ ವರ್ಷಾಚರಣೆಯ ವಾರ್ಷಿಕ ವಿಶೇಷ ಶಿಬಿರ ತಾ. 22 ರಿಂದ 28 ರವರೆಗೆ ಬೇಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ವಹಿಸಲಿರುವರು, ಶಿಬಿರ ಕಾಲೇಜು ಪ್ರಾಂಶುಪಾಲೆ ಪ್ರೊ. ಎಸ್. ಆರ್. ಉಷಾಲತಾ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್‍ಕುಮಾರ್, ಕಾರ್ಯನಿರ್ವಹಣಾಧಿಕಾರಿ ಮೂಕಳಮಾಡ ಮೊಣ್ಣಪ್ಪ, ಹುದಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೇಖಾ ಪೊನ್ನಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ: ಮಡಿಕೇರಿಯ ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಶಾಲಾ ಮೈದಾನದಲ್ಲಿ ತಾ. 22 ರಂದು ಬೆಳಿಗ್ಗೆ 11 ರಿಂದ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಪಾಲ್ಗೊಳ್ಳಲಿದ್ದು, ಬಿ.ಕೆ. ಸುಬ್ಬಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಪಾಜೆ: ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಡಾ. ಕೀಲಾರು ಗೋಪಾಲಕೃಷ್ಣಯ್ಯ ಸ್ಮಾರಕ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ತಾ. 26 ರಂದು ಸಂಪಾಜೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಪ್ರಯುಕ್ತ ಸಭಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಂಜೆ ಯಕ್ಷಗಾನ ಬಯಲಾಟ ನಡೆಯಲಿದೆ.
ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುಂಡಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಮಕ್ಕಳಿಗೆ ಸಾಂಸ್ಕøತಿಕ ಹಾಗೂ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ 4 ತಿಂಗಳ ಹಿಂದೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನದಿದಡದಲ್ಲಿ ಪ್ರವಾಹ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಗ್ರಾಮ ಲೆಕ್ಕಿಗ ಅನೂಷ ಸೇರಿದಂತೆ ಸ್ಥಳೀಯ ಅಧಿಕಾರಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಸಂಜೆ ಮನೋರಂಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮುಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.