ಮಡಿಕೇರಿ, ಡಿ. 21: ನಗರದ ಸ್ಟಿವರ್ಟ್ ಹಿಲ್ ನಿವಾಸಿ, ಗುತ್ತಿಮುಂಡನ ಪೂಣಚ್ಚ ಎಂಬಾತ ತನ್ನ 2ನೇ ಪತ್ನಿ ಉಷಾ (47) ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದಿರುವ ಬಗ್ಗೆ ನಗರ ಠಾಣೆ ಮಹಿಳಾ ಘಟಕ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ತಾ. 18 ರಂದು ರಾತ್ರಿ ಆರೋಪಿಯು ಕುಡಿದ ಅಮಲಿನಲ್ಲಿದ್ದ ಪತ್ನಿಗೆ ಹೊಡೆದ ವೇಳೆ, ಆಕೆ ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದಳೆನ್ನಲಾಗಿದೆ. ವಿಷಯ ತಿಳಿದು ಆಕೆಯ ಸೋದರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಉಷಾ ಕೊನೆಯುಸಿರೆಳೆದಿದ್ದಾರೆ. ಆ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ; ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಾಜಿ ಸೈನಿಕನಾಗಿರುವ ಆರೋಪಿಗೆ ಮೃತಳು 2ನೇ ಪತ್ನಿಯೆಂದು ತಿಳಿದು ಬಂದಿದೆ.