ಮಡಿಕೇರಿ, ಡಿ. 20: ಕರ್ನಾಟಕ ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ದಿ. ಅಬ್ದುಲ್ ನಜೀರ್ ಸಾಬ್‍ರವರ 85ನೇ ಜನ್ಮ ದಿನವನ್ನು ಪಾಲಿಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಆಚರಿಸಲಾಯಿತು.

ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅವರು ನಜೀರ್ ಸಾಬ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಜೀರ್ ಸಾಬರ ದೂರದೃಷ್ಟಿ, ಆಡಳಿತ, ಪ್ರಸ್ತುತ ಪಂಚಾಯಿತಿ ವ್ಯವಸ್ಥೆ ಉತ್ತಮಗೊಳ್ಳಲು ಕಾರಣವಾಯಿತು ಎಂದರು.