ಮಡಿಕೇರಿ, ಡಿ. 20 : ಜಾನಪದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಯವಕಪಾಡಿಯ ಜಾನಕಿ ತಮ್ಮಯ್ಯ ಅವರು 2018ನೇ ಸಾಲಿನ ಜಾನಪದ ಕಲಾವಿದರ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜರಾಗಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿಯು 2018ನೇ ಸಾಲಿನ ವಾರ್ಷಿಕ ಕಲಾವಿದರ ಗೌರವ ಪ್ರಶಸ್ತಿಗಾಗಿ ಸೆ. 25 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಜಾನಕಿ ತಮ್ಮಯ್ಯ ಅವರನ್ನು ಆಯ್ಕೆಮಾಡಿದ್ದು, ಡಿ. 27 ರಂದು ಸಂಜೆ 6 ಗಂಟೆಗೆ ಬೀದರಿನ ಜಿಲ್ಲಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇನ್ನಿತರ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.