ಶನಿವಾರಸಂತೆ, ಡಿ. 19: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶನಿವಾರಸಂತೆ ಪಶು ಚಿಕಿತ್ಸಾಲಯ, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಅಂಕನಹಳ್ಳಿ ಹಾಲು ಉತ್ಪಾದಕರ ಸಂಘ ಸಹಭಾಗಿತ್ವದಲ್ಲಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ ಮೆಣಸ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು.

ಶಿಬಿರದಲ್ಲಿ 230 ರಾಸುಗಳು ಪಾಲ್ಗೊಂಡಿದ್ದು ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಯಿತು. ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಜಾನುವಾರುಗಳಿಗೆ ಕಾಲು-ಬಾಯಿ ಜ್ವರದ ಲಸಿಕೆ ಹಾಕಲಾಯಿತು. ಔಷಧಿ, ಜಂತುನಾಶಕ ಹಾಗೂ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ರೈತರಿಗೂ ಪಶು ಆಹಾರವನ್ನು ವಿತರಿಸಲಾಯಿತು.

ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ನಾಗರಾಜ್ ಉದ್ಘಾಟಿಸಿದರು. ಸದಸ್ಯ ಮಂಜುನಾಥ್, ಗ್ರಾಮಾಧ್ಯಕ್ಷ ಮೋಹನ್, ಸದಸ್ಯ ತ್ಯಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ. ವಸಂತ್, ಕಾರ್ಯದರ್ಶಿ ವರದರಾಜಪ್ಪ, ಪಶು ವೈದ್ಯಾಧಿಕಾರಿಗಳಾದ ಡಾ. ಎಂ. ಲತಾ, ಡಾ. ಕೆ.ಸಿ. ಭಾನುಪ್ರಕಾಶ್, ಜಾನುವಾರು ಅಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಸರ್ವರ್ ಪಾಶ, ಧರ್ಮರಾಜ್ ಹಾಗೂ ಪುಷ್ಪ ಉಪಸ್ಥಿತರಿದ್ದರು.