ಮಡಿಕೇರಿ, ಡಿ. 19: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಂದಿರಾ ಮಹಿಳಾ ಶಕ್ತಿ ಎಂಬ ನೂತನ ಸಮಿತಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವರ್ಣಲತಾ ಅವರ ಸಮ್ಮುಖದಲ್ಲಿ ರಚಿಸಲಾಯಿತು. ಈ ಸಭೆಯಲ್ಲಿ ಸರ್ವ ಮಹಿಳಾ ಸದಸ್ಯರ ಅನುಸಾರ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಶಶಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಂಜುಳಾ ಮಂಜು, ಆಶಾ, ಪ್ರೇಮಸೋಮಯ್ಯ, ಪ್ರ.ಕಾರ್ಯದರ್ಶಿಗಳಾಗಿ ಫಿಲೋಮಿನಾ, ಮಮ್ತಾಜ್ ಬೇಗಂ, ಸಹಕಾರ್ಯದರ್ಶಿಗಳಾಗಿ ಸಫಿಯ, ತಾರ, ಉದಯಚಂದ್ರಿಕ, ಖಜಾಂಚಿಯಾಗಿ ಸೌಭಾಗ್ಯ ಮತ್ತು ಗೌರವ ಸಲಹೆಗಾರರಾಗಿ ಸ್ವರ್ಣಲತಾ, ಜುಲೈಕಾಬಿ, ತಜುಸುಂ ಅವರುಗಳನ್ನು ನೇಮಕ ಮಾಡಲಾಯಿತು.
ಸಮಿತಿ ಸದಸ್ಯರಾಗಿ ರಾಣಿ, ಪರ್ವಿನ್, ಪ್ಯಾನ್ಸಿ ಪಾರ್ವತಿ, ಲೀಲಾವತಿ, ಸೀತಾ ಚಿಕ್ಕಣ್ಣ, ಸರೋಜ, ಲೀಲಾವತಿ, ಹಸೀನಾ, ಜಯಶ್ರೀ, ಗೌರಮ್ಮ, ಚಂದ್ರಾವತಿ, ಆಯಿಷಾ, ಆಶಾ, ಪರ್ಜನಾ, ಸುಮಯ, ನಜೀಮ, ವನಿತಾ, ಕುಸುಮ, ಜಯಂತಿ ಅವರುಗಳನ್ನು ಆಯ್ಕೆ ಮಾಡಲಾಯಿತು.