ಮಡಿಕೇರಿ, ಡಿ. 20: ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ 3 ಶೀಘ್ರಲಿಪಿಗಾರರ ಹುದ್ದೆಗಳು, 7 ಬೆರಳಚ್ಚುಗಾರರ ಹುದ್ದೆಗಳು, 4 ನಕಲು-ಬೆರಳಚ್ಚುಗಾರರ ಹುದ್ದೆಗಳು, 21 ಆದೇಶಿಕ ಜಾರಿಕಾರರ ಹುದ್ದೆಗಳು ಹಾಗೂ 9 ಸೇವಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯ ವೆಬ್‍ಸೈಟ್ :hಣಣಠಿs://ಜisಣಡಿiಛಿಣs.eಛಿouಡಿಣs.gov.iಟಿ/ಞoಜಚಿgu-oಟಿಟiಟಿeಡಿeಛಿಡಿuiಣmeಟಿಣ ರಲ್ಲಿ ನೀಡಲಾದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನವಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಚಲನ್ ಮುಖಾಂತರ ಶುಲ್ಕವನ್ನು ಪಾವತಿಸಲು ಜನವರಿ 31 ಕೊನೆಯ ದಿನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.