ಮಡಿಕೇರಿ, ಡಿ.20 : ಎರಡನೇ ಮೊಣ್ಣಂಗೇರಿ ನೆರೆ ಸಂತ್ರಸ್ತ ಮಹಿಳೆಯರಿಗಾಗಿ ಸ್ತ್ರೀ ರೋಗ ತಜ್ಞ ವೈದ್ಯರಿಂದ ತಾ. 21 ರಂದು (ಇಂದು) ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಗಾಳಿಬೀಡು ಗ್ರಾ.ಪಂ ಸದಸ್ಯ ಧನಂಜಯ ಅಗೊಳಿಕಜೆ ತಿಳಿಸಿದ್ದಾರೆ.
ಎರಡನೇ ಮೊಣ್ಣಂಗೇರಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಚೇರಿಯ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯುವ ಶಿಬಿರವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಮುಕುಂದ ಉದ್ಘಾಟಿಸಲಿದ್ದಾರೆ.
ತಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸ್ತ್ರೀರೋಗ ತಜ್ಞೆ ಡಾ. ರಾಜೇಶ್ವರಿ ನವೀನ್ ಕುಮಾರ್, ಅತಿಥಿಗಳಾಗಿ ಗಾಳಿಬೀಡು ಗ್ರಾ.ಪಂ. ಸದಸ್ಯೆ ವಿಜಯಲಕ್ಷ್ಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದೆನಾಡು ಒಕ್ಕೂಟದ ಅಧ್ಯಕ್ಷೆ ಎ.ಆರ್. ಹೂವಮ್ಮ ಹಾಗೂ ಮೊಣ್ಣಂಗೇರಿ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ. ಗಣೇಶ್ ಉಪಸ್ಥಿತರಿರುವರು.
ನೆರೆ ಸಂತ್ರಸ್ತ ಮಹಿಳೆಯರು ಶಿಬಿರದ ಲಾಭ ಪಡೆದುಕೊಳ್ಳುವಂತೆ ಧನಂಜಯ ಅಗೊಳಿಕಜೆ ಮನವಿ ಮಾಡಿದ್ದಾರೆ.