ಮಡಿಕೇರಿ, ಡಿ. 11: ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ತೆರಳುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ತಾ. 19 ರಂದು ಕೊನೆ ದಿನವಾಗಿದೆ.
ಬರುವವರಿಗೆ ಮೂರು ದಿನಗಳು ಊಟ, ವಸತಿ ಮತ್ತು ಓಓಡಿ ಸೌಲಭ್ಯವಿರುತ್ತದೆ. ಆಸಕ್ತರು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಕೋಟೆ ಆವರಣ ಮಡಿಕೇರಿ ಇಲ್ಲಿಗೆ ರೂ. 250 ಗಳನ್ನು ನೀಡಿ ತಮ್ಮ ಹೆಸರು ನೋಂದಾಯಿಸಿ ರಸೀದಿ ಪಡೆಯುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಮೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8277066123 ಸಂಪರ್ಕಿಸಲು ತಿಳಿಸಲಾಗಿದೆ.