ಸೋಮವಾರಪೇಟೆ, ಡಿ. 12: ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸದಸ್ಯರಿಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಸದಸ್ಯರಿಗೆ ಗುರುತಿನ ಚೀಟಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು. ಭಾರತೀಯ ಮಜ್ದೂರ್ ಸಂಘವು ದೇಶಭಕ್ತ ಕಾರ್ಮಿಕ ಸಂಘಟನೆ ಯಾಗಿದ್ದು, ಇನ್ನಷ್ಟು ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಮಾತನಾಡಿ, ಸ್ವಹಿತಾದೊಂದಿಗೆ ದೇಶದ ಹಿತಕ್ಕೂ ಪ್ರಾಮುಖ್ಯತೆ ನೀಡುವ ಏಕೈಕ ಕಾರ್ಮಿಕ ಸಂಘಟನೆಯಾಗಿ ಭಾರತೀಯ ಮಜ್ದೂರ್ ಸಂಘ ಬೆಳವಣಿಗೆ ಕಾಣುತ್ತಿದೆ. ಸಂಘದ ಮಾರ್ಗದರ್ಶನ ದಲ್ಲಿ ದೇಶಭಕ್ತಿಯೊಂದಿಗೆ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ದೇಶದ ಭವಿಷ್ಯವೇ ಕಾರ್ಮಿಕ ರಲ್ಲಿದೆ. ದೇಶ ಕಟ್ಟುವ ಕಾರ್ಯದಲ್ಲಿ ಸಂಘಟನೆ ಯ ಪಾತ್ರ ಅಪಾರ ಎಂದರಲ್ಲದೇ, ಸರ್ಕಾ ರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಕೆ. ಮೋಹನ್ ವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷ ಯೋಗೇಂದ್ರ, ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ ಸಾಯಿ, ಕಾರ್ಮಿಕ ಇಲಾಖಾ ನಿರೀಕ್ಷಕ ಮಹದೇವ ಸ್ವಾಮಿ, ವೀರಾಜಪೇಟೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಕೆ. ಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.