ಮಡಿಕೇರಿ, ಡಿ.12: ಕೊಡಗಿನಲ್ಲಿ ಜಮ್ಮಾ ಬಾಣೆ ಮತ್ತಿತರ ಬಾಣೆ ಜಾಗಗಳಿಗೆ ಕಂದಾಯ ವಿಧಿಸುವಂತೆ ಭೂ ಕಂದಾಯ ಕಾಯ್ದೆ ಕಲಂ(2) ಮತ್ತು ಕಲಂ 80ಕ್ಕೆ ತಿದ್ದುಪಡಿಯಾಗಿರುವದು ಸರ್ಕಾರದ ಗಮನದಲ್ಲಿದೆಯೇ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಕಂದಾಯ ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು ಕೊಡಗಿನಲ್ಲಿ ಜಮ್ಮಾ ಬಾಣೆ ಮತ್ತಿತರ ಬಾಣೆ ಜಾಗಗಳಿಗೆ ಕಂದಾಯ ವಿಧಿಸುವಂತೆ ಭೂಕಂದಾಯ ಕಾಯ್ದೆ ಕಲಂ(2) ಮತ್ತು ಕಲಂ 80ಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ಹಾಗಿದ್ದಲ್ಲಿ ಇದನ್ನು ಯಥಾವತ್ತಾಗಿ ಜಾರಿಗೊಳಿಸದೇ ಇರಲು ಕಾರಣವೇನು? ಈ ಬಗ್ಗೆ ಸರ್ಕಾರದ ನಿಲುವೇನು ? ಇಲ್ಲಿಯವರೆಗೆ ಎಷ್ಟು ಎಕರೆ ಬಾಣೆ ಜಾಗಗಳನ್ನು ಕಂದಾಯಕ್ಕೆ ಅಳವಡಿಸಲಾಗಿದೆ? ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿಯಂತೆ ಕಂದಾಯ ವಿಧಿಸಲು ಉಪ ವಿಭಾಗಾಧಿಕಾರಿಗಳಿಗೆ ಅಧಿಕಾರ ಪ್ರಸ್ತಾವವಾಗಿದ್ದು,ಕಂದಾಯ ಬಾರದ ಜಮ್ಮಾ ಬಾಣೆ ಜಮೀನುಗಳಿಗೆ ಪ್ರಕರಣವಾರು ಕೊಡಗು ಜಿಲ್ಲೆಯಲ್ಲಿ ನಿಯಮಾನುಸಾರ ಕಂದಾಯ ನಿಗಧಿಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಕಂದಾಯ ಅನುಮೋದನೆಯಾಗಿರುವ ಬಾಣೆ

ಜಮೀನುಗಳು ಮಡಿಕೇರಿ ತಾಲೂಕಿನಲ್ಲಿ 87,666.17 ವಿಸ್ತೀರ್ಣ, ವೀರಾಜಪೇಟೆ ತಾಲೂಕಿನಲ್ಲಿ

(ಮೊದಲ ಪುಟದಿಂದ) 97,368.42 ವಿಸ್ತೀರ್ಣ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 6253.65 ವಿಸ್ತೀರ್ಣ ಒಟ್ಟು 1,91,288.24 ಎಕರೆ ಜಮೀನು ಕಂದಾಯಕ್ಕೆ ಅಳವಡಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ವಾಸವಿರುವ ಗಿರಿಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಕೊಡಗು ಜಿಲ್ಲೆಯ ಅರಣ್ಯಾಧಿಕಾರಿಗಳ ಸಭೆ ನಡೆಸಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಅರಣ್ಯವಾಸಿ ಗಿರಿಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯದೊಳಗೆ ‘ಅಂಡರ್‍ಗ್ರೌಂಡ್ ಕೇಬಲ್’ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆಯೇ? ಹಾಗಿದ್ದಲ್ಲಿ ಈ ಯೋಜನೆಗೆ ತಾಂತ್ರಿಕ ಸಲಹೆ ಪಡೆಯಲಾಗಿದೆಯೇ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯ ಪಡೆಯಲಾಗಿದೆಯೇ, ಈ ಬಗ್ಗೆ ಸರ್ಕಾರದ ನಿಲುವೇನು? ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.

ಈ ವಿಷಯವಾಗಿ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ ರವರು 2018ರ ಫೆಬ್ರವರಿ, 22 ರಂದು ಸಭೆ ನಡೆಸಿರುತ್ತಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಅರಣ್ಯವಾಸಿ ಗಿರಿಜನರಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ‘ಅಂಡರ್ ಗ್ರೌಂಡ್ ಕೇಬಲ್’ ಮತ್ತು ‘ಓಪನ್ ಪೋಲ್ ಕೇಬಲ್’ ಕಾಮಗಾರಿಯ ತುಲನಾತ್ಮಕ ಪಟ್ಟಿಯನ್ನು ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಮಡಿಕೇರಿ ಇವರಿಂದ ಪಡೆಯಲು ಯೋಜನಾ ಸಮನ್ವಯಾಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿರುತ್ತಾರೆ.

ರಾಜ್ಯವು ಕಳೆದೆರಡು ವರ್ಷಗಳಿಂದ ಆಚರಿಸುತ್ತಿರುವ ವಿವಿಧ ಶ್ರೇಷ್ಠರ ಜಯಂತಿ ಕಾರ್ಯಕ್ರಮಗಳ್ಯಾವವು, ಈ ಜಯಂತಿ ಆಚರಿಸಲು ಅನುಸರಿಸಲು ಅನುಸರಿಸುವ ಮಾನದಂಡಗಳೇನು, ಇವರ ಕೊಡುಗೆ ಆದರ್ಶಗಳನ್ನು ಪಾಲಿಸಲು ಕೈಗೊಂಡಿರುವ ಕ್ರಮಗಳೇನು? ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕನ್ನಡ ಮತ್ತು ಸಂಸ್ಕøತಿ ಸಚಿವರಲ್ಲಿ ಪ್ರಶ್ನಿಸಿದರು.

2017-18ನೇ ಸಾಲಿನಲ್ಲಿ ಒಟ್ಟು 25 ಜಯಂತಿಗಳು, 2018-19 ನೇ ಸಾಲಿನಲ್ಲಿ ಒಟ್ಟು 27 ಜಯಂತಿಗಳು, ಮಹನೀಯರ ಜಯಂತಿಗಳನ್ನು ಆಚರಿಸಲು ಕೋರಿ ಸಾರ್ವಜನಿಕರಿಂದ ಬಂದ ಪತ್ರಗಳನ್ನು ಪರಿಶೀಲಿಸಿ, ಇಲಾಖಾ ಸಚಿವರ, ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಜಯಂತಿಗಳನ್ನು ಏಕ ಕಾಲದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಜಯಂತಿ ಆಚರಿಸುತ್ತಿರುವ ಮಹಾಪುರುಷರ ಜೀವನ ಸಾಧನೆ ಕುರಿತಂತೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತಿದೆ ಹಾಗೂ ಕಿರು ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಈ ಜಯಂತಿಗಳಿಗಾಗಿ ಖರ್ಚು ಮಾಡುವ ಮೊತ್ತವೆಷ್ಟು, ಕೆಲವೊಂದು ಜಯಂತಿಗಳಿಗೆ ವೈಚಾರಿಕ ಸಂಘರ್ಷ ಹಾಗೂ ಗೊಂದಲಗಳಿರುವ ಬಗ್ಗೆ ಸರ್ಕಾರದ ನಿಲುವೇನು ? ಎಂಬ ಪ್ರಶ್ನೆಗೆ ಇಲಾಖೆಯ ಕ್ರಿಯಾಯೋಜನೆಯಡಿ ನಿಗದಿಪಡಿಸಿರುವ ಮೊತ್ತವನ್ನು ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಜಯಂತಿ ಆಚರಣೆಗೆ ವೆಚ್ಚ ಮಾಡಲಾಗಿರುತ್ತದೆ.

ವಿವಾದಾತ್ಮಕ ವ್ಯಕ್ತಿಗಳ ಜಯಂತಿಗೆ ಸರ್ಕಾರವು ಮುಂದಾಗಿರುವ ಕಾರ್ಯಗಳೇನು ಇಂತಹ ತೀರ್ಮಾನ ಕೈಗೊಳ್ಳುವ ಮೂಲಕ ಸಮಸ್ಯೆಗಳನ್ನು ಸರ್ಕಾರ ಉದ್ಭವ ಮಾಡಿಕೊಳ್ಳಲು ಬಯಸುವದೇ? ಎಂಬ ಪ್ರಶ್ನೆಗೆ ವ್ಯಕ್ತಿಗಳ ಜಯಂತಿಗಳನ್ನು ಇಲಾಖೆ ಸಚಿವರ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಜಯಂತಿಗಳನ್ನು ಆಚರಿಸಲಾಗುತ್ತದೆ. ಯಾವದೇ ವಿವಾದಾತ್ಮಕ, ಸಮಸ್ಯೆಗಳು ಉದ್ಭವಿಸಿರುವದಿಲ್ಲ ಎಂದ ಪ್ರತಿಕ್ರಿಯಿಸಿದರು.