ಮಡಿಕೇರಿ, ಡಿ. 11: ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ನೂತನ ಮಾದರಿಯ ಎಚ್ಚರಿಕೆ ಸಂದೇಶವನ್ನು ಪ್ರದರ್ಶಿಸಬೇಕು, ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ಸೂಚನೆ ನೀಡಿದಾರೆ.
ಎಲ್ಲಾ ತಂಬಾಕು ಉತ್ಪನ್ನಗಳ ತಯಾರಕರು, ದಾಸ್ತಾನುಗಾರರು, ವಿತರಕರು ಹಾಗೂ ಮಾರಾಟಗಾರರು, ನೂತನ ಎಚ್ಚರಿಕೆಯ ಸಂದೇಶವನ್ನು ಹೊಂದಿರುವ ಪ್ಯಾಕೆಟ್ಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆ, ಉತ್ಪಾದಕರ ಮಳಿಗೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾ ಗುವದು. ನಿಯಮ ಉಲ್ಲಂಘಿಸು ವವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ತಿಳಿಸಿದ್ದಾರೆ.
ಸೆಕ್ಷನ್ 4 ರಂತೆ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಎಚ್ಚರವಹಿಸುವದು. “ಧೂಮಪಾನ ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡುವದು ಅಪರಾಧ, ಉಲ್ಲಂಘಿಸಿದಲ್ಲಿ ರೂ.200 ರವರೆಗೆ ದಂಡ ವಿಧಿಸಲಾಗುವದು” ಎಂಬ ಎಚ್ಚರಿಕೆಯ ಫಲಕ (ಸೈನೇಜ್)ವನ್ನು 60x45 ಸೆ.ಮೀ ಗಾತ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವದು. ಧೂಮಪಾನಕ್ಕೆ ಉತ್ತೇಜನಕಾರಿ ವಸ್ತುಗಳಾದ ಬೆಂಕಿ ಪೊಟ್ಟಣ, ಆ್ಯಶ್ ಟ್ರೇ, ಲ್ಶೆಟರ್ಗಳನ್ನು ಗ್ರಾಹಕರಿಗೆ ನೀಡಬಾರದು.
ಸೆಕ್ಷನ್ 5 ರಂತೆ: ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಾಹೀರಾತುಗಳನ್ನು ಪ್ರದರ್ಶನ ಮಾಡುವಂತಿಲ್ಲ. ಸೆಕ್ಷನ್ 6(ಎ) ರಂತೆ: 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು ಹಾಗೂ ಅವರಿಂದ ಮಾಡಿಸಬಾರದು. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು ಶಿಕ್ಷಾರ್ಹ ಅಪರಾಧ’ ಎಂಬ ನಾಮಫಲಕ (ಸೈನೇಜ್)ವನ್ನು 60x45 ಸೆ.ಮೀ. ಗಾತ್ರದಲ್ಲಿ ಅಂಗಡಿಯ ಮುಂದೆ ಕಡ್ಡಾಯವಾಗಿ ಪ್ರದರ್ಶಿಸುವದು.
ಸೆಕ್ಷನ್ 6(ಬಿ) ರಂತೆ: ಶಾಲಾ-ಕಾಲೇಜು, ಇತರೆ ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಯಾರ್ಡ್ (ಗಜ) ಗಳ ಅಂತರದಲ್ಲಿ ತಂಬಾಕು ಉತ್ಪನ್ನ ಗಳ ಮಾರಾಟ ಮಾಡುವಂತಿಲ್ಲ. “ಈ ವಿದ್ಯಾಸಂಸ್ಥೆಯ ಆವರಣದಿಂದ 100 ಯಾರ್ಡ್ (ಗಜ) ಅಂತರದಲ್ಲಿ ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದ್ದು ರೂ. 200 ರವರೆಗೆ ಖಿhe ಅigಚಿಡಿeಣಣes &amdiv; ಔಣheಡಿ ಖಿobಚಿಛಿಛಿo Pಡಿoಜuಛಿಣs ಂಛಿಣ (ಅಔಖಿPಂ) 2003 ರ ಕಾಯ್ದೆಯಡಿ ದಂಡ ವಿಧಿಸಲಾ ಗುವದು” ಎಂಬ ಗೋಡೆಬರಹ ಅಥವಾ ನಾಮಫಲಕವನ್ನು 3x2 ಅಡಿ ಗಾತ್ರದಲ್ಲಿ ಶೈಕ್ಷಣಿಕ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವದು.
ಸೆಕ್ಷನ್ 7 ರಂತೆ: ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಮೇಲೆ ನಿರ್ದಿಷ್ಟ ಎಚ್ಚರಿಕೆ ಚಿಹ್ನೆ ಇಲ್ಲದೆ ಮಾರಾಟ ಮಾಡುವಂತಿಲ್ಲ ಪ್ಯಾಕ್ಗಳ ಮೇಲೆ ನಿರ್ದಿಷ್ಟ ಎಚ್ಚರಿಕೆ ಚಿಹ್ನೆಯನ್ನು ಉತ್ಪಾದಕರು ತಿತಿತಿ.mohಜಿತಿ. ಟಿiಛಿ.iಟಿ ಇದರ ಮೂಲಕ ಪಡೆಯುವದು. ಭಾರತ ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಜಿ.ಎಸ್. ಆರ್. 331 (ಇ) ದಿನಾಂಕ: 3.4.2018ರಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೇಟ್ ಮೇಲೆ ಕಡ್ಡಾಯವಾಗಿ ಪ್ರದರ್ಶಿಸಲು ಹೊಸ ಚಿತ್ರ ಸಹಿತ ಎಚ್ಚರಿಗೆ ಸಂದೇಶಗಳನ್ನು ಪ್ರಕಟಿಸಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.