ಮಡಿಕೇರಿ, ಡಿ. 11: ಇಲ್ಲಿನ ಸುದರ್ಶನ ಬಡಾವಣೆಯಲ್ಲಿರುವ ಮುನೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಿಗೆಂದು ದಾಸ್ತಾನಿರಿಸಿದ್ದ ಸಿಮೆಂಟ್ ಚೀಲ ಹಾಗೂ ಕಬ್ಬಿಣದ ಸಲಾಖೆಗಳನ್ನು ಕಳವು ಮಾಡಿದ ಚೋರನನ್ನು ಪೊಲೀಸರು ಬಂಧಿಸಿದ್ದಾರೆ. ಪುಟಾಣಿನಗರ ನಿವಾಸಿ ಮನೋಜ್ ಬಂಧಿತನಾಗಿದ್ದು, ಈ ಸಂಬಂಧ ನಗರ ಠಾಣಾಧಿಕಾರಿ ಷಣ್ಮುಗಂ ಅವರು ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಂಡಿದ್ದಾರೆ.