ಚೆಟ್ಟಳ್ಳಿ, ಡಿ. 11: ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೂತನ ಅಧ್ಯಕ್ಷರಾಗಿ ಕೆ.ಹೆಚ್. ಹಂಸ ರಹ್ಮಾನಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎ. ಹಾರಿಸ್, ಕೋಶಾಧಿಕಾರಿಯಾಗಿ ಟಿ.ಎ. ನಿಜಮ್ ಮತ್ತು ಕ್ಯಾಂಪಸ್ ಕಾರ್ಯದರ್ಶಿಯಾಗಿ ಕೆ.ಎಂ. ಇರ್ಷಾದ್ ಇವರುಗಳನ್ನು ಯೂನಿಟ್‍ನ ವಾರ್ಷಿಕ ಸಭೆಯಲ್ಲಿ ಆಯ್ಕೆಮಾಡಲಾಯಿತು.

ವಾರ್ಷಿಕ ಸಭೆಯ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಎಸ್.ಎಸ್.ಎಫ್. ಅಧ್ಯಕ್ಷ ಜುಬೈರ್ ಸಹದಿ, ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಸಿದ್ದಾಪುರ ಸೆಕ್ಟರ್ ಅಧ್ಯಕ್ಷ ನೌಫಲ್ ಮಲ್ ಹರಿ, ಕಾರ್ಯದರ್ಶಿ ರಜಾಕ್ ಸಹದಿ, ಕಂಡಕರೆ ಮಹಲ್ ಅಧ್ಯಕ್ಷ ಆಲಿ ಉಸ್ತಾದ್, ಜಂಶೀದ್, ರಶೀದ್, ಫಾರೂಖ್ , ನೌಷಾದ್, ಇಬ್ರಾಹಿಂ ನೌಫಲ್ ಮತ್ತಿತರರು ಇದ್ದರು.