ಕೂಡಿಗೆ, ಡಿ. 10 : ಕೂಡಿಗೆಯ ಸತ್ಯನಾರಾಯಣ ವೃತಾಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ದೀಪೋತ್ಸವ ಕಾರ್ತಿಕ ಮಾಸದ ಕೊನೆಯ ದಿನ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ದೀಪೋತ್ಸವದ ಉದ್ಘಾಟನೆ ಯನ್ನು ಕೂಡಿಗೆ ಟಾಟಾ ಕಾಫಿ ವಕ್ರ್ಸ್‍ನ ವ್ಯವಸ್ಥಾಪಕ ರಿಕ್ಕಿ ಅಯ್ಯಪ್ಪ ಅವರು ನೆರವೇರಿಸಿದರು. ಈ ಸಂದÀರ್ಭದಲ್ಲಿ ಕಾಸಗೋಡನ ಸುದರ್ಶನ ತಂಡದವರಿಂದ ಭಜನ ಕಾರ್ಯಕ್ರಮ ನಡೆದವು.

ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದರು. ಪೊಜೋತ್ಸವನ್ನು ದೇವಾಲಯದ ಆರ್ಚಕ ನವೀನ ಭಟ್ ನೆರವೇರಿಸಿದರು. ಈ ಸಂದÀರ್ಭದಲ್ಲಿ ಸತ್ಯನಾರಾಯಣ ವೃತಾಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿದ್ದರು. ದೇವಾಲಯವು ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿತ್ತು.