ಮಡಿಕೇರಿ, ಡಿ. 10 : ಕಾವೇರಿ ಕಾಲೇಜು ಗೋಣಿಕೊಪ್ಪಲಿನ ರಾಷ್ಟ್ರೀಯ ಸೇವಾ ಯೋಜನೆಯ ದತ್ತು ಗ್ರಾಮ ಪರಿಕಲ್ಪನೆಗೆ ಬೇಗೂರು ಗ್ರಾಮವನ್ನ ಅಯ್ಕೆ ಮಾಡಿಕೊಳ್ಳಲಾಗಿದೆ.ಈ ಶೈಕ್ಷಣಿಕ ವರ್ಷದಲ್ಲಿ ಬೇಗೂರು ಅಭಿವೃದ್ಧಿಗೆ ಶ್ರಮಿಸುವದಲ್ಲದೆ ಅಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಜನಪ್ರತಿನಿಧಿಗಳ ಮೂಲಕ ಬಗೆಹರಿಸುವ ಸಂಕಲ್ಪ ಮಾಡಿದೆ. 2018-19 ನೇ ಸಾಲಿನ ಎನ್.ಎಸ್.ಎಸ್ ಸುವರ್ಣ ಮಹೋತ್ಸವ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ಈ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ತಾ. 22 ರಿಂದ 28 ವರೆಗೆ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಶಿಬಿರ ನಡೆಯಲಿದೆ. ಇದರಲ್ಲಿ ಗ್ರಾಮದ ಸ್ವಚ್ಛತೆ, ಶೌಚಾಲಯ ನಿರ್ಮಾಣ, ರಸ್ತೆ ರಿಪೇರಿ, ದೇವಾಲಯ ಸ್ವಚ್ಛತೆ, ಗ್ರಾಮ ಸಮೀಕ್ಷೆ, ಕೊಡಗಿನ ಸಾಂಪ್ರದಾಯಿಕ ನೃತ್ಯದ ಬೆಳವಣಿಗೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು ಎಂದು ಎನ್.ಎಸ್.ಎಸ್ ಅಧಿಕಾರಿಗಳಾದ ಮಂದೇಯಂಡ ವನಿತ್ ಕುಮಾರ್ ಮತ್ತು ಮಚ್ಚಮಾಡ ರೀತಾ ತಿಳಿಸಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಸಭೆ ನಡೆಸಿ ಇದರ ಜವಾಬ್ದಾರಿಯ ಅಧ್ಯಕ್ಷರಾಗಿ ಕೆ.ಎನ್. ಅರುಣ್ ರವರಿಗೆ ವಹಿಸಲಾಗಿದ್ದು ಇವರ ಜೊತೆ ಎಂ.ಎಂ.ರಾಜ ಮುತ್ತಪ್ಪ ಹಾಗೂ ಎಂ.ಜೆ.ರಾಜೇಂದ್ರ ಅವರು ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.