ಮೂರ್ನಾಡು, ಡಿ. 10: ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪೆಬ್ಬಾಟಂಡ ಎ. ಪೆಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಮುಂಡಂಡ ಕೆ. ಕುಟ್ಟಪ್ಪ ಆಯ್ಕೆಗೊಂಡಿದ್ದಾರೆ. ನ. 28 ರಂದು ನಡೆದ ಚುನಾವಣೆಯಲ್ಲಿ 15 ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪುದಿಯೊಕ್ಕಡ ಎಸ್. ಸೋಮಯ್ಯ, ಬಡುವಂಡ ಎ. ಚಿಣ್ಣಪ್ಪ, ವಾಂಚೀರ ಎ. ಸುಭಾಷ್, ಅಲ್ಮಚಂಡ ಎ. ಮೊಣ್ಣಪ್ಪ, ಮೂಡೇರ ಡಿ. ಅಶೋಕ್ ಅಯ್ಯಪ್ಪ, ಮೂಡೇರ ಕೆ. ಮಾದಪ್ಪ, ಉಳುವಾರನ ಎಸ್. ರಾಧಕೃಷ್ಣ, ತೆಕ್ಕಡೆ ಶೋಭಾ ಮೋಹನ್, ಕೈಪೆಟ್ಟಿರ ಸಿ. ಭಾರತಿ, ಆಂಗಿರ ಎಂ. ಮಾದಪ್ಪ, ಅಮ್ಮಣಂಡ ಪಿ. ಪೂಣಚ್ಚ (ರಮೇಶ್), ಎಂ.ಟಿ. ದೇವಪ್ಪ, ಹೆಚ್.ಎಂ. ಬೊಳ್ಳು ಅವರುಗಳು ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.