ಮಡಿಕೇರಿ, ಡಿ. 10: ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸುರಭಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಮಕ್ಕಳ ಸಂತೆ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎ. ಅಬೂಬಕರ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವದು, ವ್ಯವಹಾರ ಜ್ಞಾನ, ಸಾವಯವ ಕೃಷಿಯ ಮಹತ್ವ ತಿಳಿಸುವದು, ವ್ಯವಹಾರ ಕೌಶಲ ಬೆಳೆಸುವದು, ವ್ಯವಹಾರದ ನೀತಿ ತತ್ವ, ಸಮುದಾಯದೊಂದಿಗಿನ ಬಾಂಧವ್ಯ ವೃದ್ಧಿ, ಶಾಲೆಯೆಡೆಗೆ ಸಮುದಾಯದ ನಡೆ ಮುಂತಾದ ಉದ್ದೇಶಗಳಿಂದ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಶಿಕ್ಷಣಾಧಿಕಾರಿ ಕಾಶಿನಾಥ್ ಭಾಗವಹಿಸಿ ದ್ದರು. ಸಂತೆಯಲ್ಲಿ ವಿದ್ಯಾರ್ಥಿಗಳು ಯಾವದೇ ವ್ಯಾಪಾರಿಗಳಿಗೂ ಕಡಿಮೆಯಿಲ್ಲದಂತೆ ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ನೆರೆದಿದ್ದವರ ಹುಬ್ಬೇರುವಂತೆ ಮಾಡಿತ್ತು. ಕಾರ್ಯಕ್ರಮದ ಉಸ್ತುವಾರಿಯನ್ನು ಸಮಾಜ ವಿಜ್ಞಾನ ಶಿಕ್ಷಕÀ ಸಿ.ಎಂ.ಮುನೀರ್ ವಹಿಸಿದ್ದರು. ಮುಖ್ಯೋಪಾಧ್ಯಾಯ ಕೆ.ಎ. ರಾಮಚಂದ್ರ ಹಾಗೂ ಇತರ ಶಿಕ್ಷಕ ವೃಂದದವರು ಹಾಜರಿದ್ದರು.