ಪೆರಾಜೆ, ಡಿ. 10: ಶ್ರೀ ಶಾಸ್ತಾವು ದೇವಾಲಯ ಪೆರಾಜೆ ಇದರ ಪಕ್ಕದಲ್ಲಿ ನೂತನ ಶ್ರೀ ನಾಗಬ್ರಹ್ಮ ಸನ್ನಿಧಿಗೆ ಶಿಲನ್ಯಾಸ ಕಾರ್ಯಕ್ರಮ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟರಮಣ ಪಾಂಙಣ್ಣಾಯ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಆಡಳಿತ ಮೊಕ್ತೇಸರಾದ ವಿಶ್ವನಾಥ್ ಕುಂಬಳಚೇರಿ, ಮಡಿಕೇರಿ ತಾ. ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ. ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ದೇವತಕ್ಕರು, ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.