ಶನಿವಾರಸಂತೆ, ಡಿ. 10: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಹೊಸಗುತ್ತಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಪೊಲೀಸರು ಧಾಳಿ ನಡೆಸಿ ಮರಳು ಸಹಿತ ಟ್ರ್ಯಾಕ್ಟರ್‍ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಹೊಸಗುತ್ತಿ ಗ್ರಾಮದ ಗಾರೆಕಟ್ಟೆತೋಡಿನಲ್ಲಿ ಶುಕ್ರವಾರ ಅಕ್ರಮವಾಗಿ ನೋಂದಣಿ ಸಂಖ್ಯೆ ಇಲ್ಲದ ಟ್ರ್ಯಾಕ್ಟರ್‍ನಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದಾಗ ಧಾಳಿ ನಡೆದಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಹರೀಶ್, ಪ್ರದೀಪ್ ಕುಮಾರ್, ವಿನಯಕುಮಾರ್ ಹಾಗೂ ಧನಂಜಯ ಆಚಾರಿ ಪಾಲ್ಗೊಂಡಿದ್ದರು.