ನಾಪೆÇೀಕ್ಲು, ಡಿ. 9: ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ. 13ರಂದು ಪ್ರತೀ ವರ್ಷದಂತೆ ಈ ವರ್ಷವು ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಗುವದು.

ಇದರ ಪ್ರಯುಕ್ತ ಬೆಳಿಗ್ಗೆ 9.30 ಗಂಟೆಗೆ ಆಶ್ಲೇಷ ಬಲಿ, ಗಣಹೋಮ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಕೋರಿದೆ.