ಕೂಡಿಗೆ, ಡಿ. 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾರೆ ಜೇನುಕುರುಬ ಹಾಡಿಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.

ಹುಣಸೆಪಾರೆಯಲ್ಲಿರುವ 15 ಜೇನು ಕುರುಬ ಕುಟುಂಬದವರಿಗೆ ಮನೆಗಳನ್ನು ನಿರ್ಮಿಸಲು, ಮತ್ತು ಮಳೆಯಿಂದ ಮನೆಯನ್ನು ಕಳೆದಕೊಂಡವರಿಗೆ ಪ್ರಥಮವಾಗಿ ನಿರ್ಮಿಸಲು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್, ಸ್ಥಳೀಯ ಪ್ರಮುಖ ಬೊಮ್ಮೇಗೌಡನ ಚಿಣ್ಣಪ್ಪ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಸೇರಿದಂತೆ ಹಾಡಿಯ ಪ್ರಮುಖರು ಹಾಜರಿದ್ದರು.