ಮಡಿಕೇರಿ, ಡಿ. 9: ಇಲ್ಲಿನ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 28ನೇ ವಾರ್ಷಿಕ ಏಕಾಹ ಭಜನೆ ಕಾರ್ಯಕ್ರಮವು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸಹಯೋಗ ದಲ್ಲಿ ಇಲ್ಲಿನ ಶ್ರೀ ಆಂಜನೇಯ ದೇವಾಲಯದಲ್ಲಿ ಜರುಗಿತು.
ಇಂದು ಬೆಳಿಗ್ಗೆ ಸೂರ್ಯೋ ದಯದಿಂದ ಆರಂಭಗೊಂಡ ಭಜನಾ ಕಾರ್ಯಕ್ರಮವು, ಸರದಿಯಲ್ಲಿ 14ಕ್ಕೂ ಅಧಿಕ ಭಜನಾ ತಂಡಗಳಿಂದ ಮುಂದುವರಿದು ಸೂರ್ಯಾಸ್ತ ದೊಂದಿಗೆ ರಾತ್ರಿ ಮುಕ್ತಾಯವಾಯಿತು.
ಬೆಳಿಗ್ಗೆ ಲಯನ್ಸ್ ಅಧ್ಯಕ್ಷ ಕೆ.ಕೆ. ದಾಮೋದರ್ ದೀಪೋಜ್ವಲನ ದೊಂದಿಗೆ ಶ್ರೀ ರಾಮಾಂಜನೇಯ ಭಜನಾ ತಂಡ ಆರಂಭಿಸಿದ ಭಜನೆಯಲ್ಲಿ ವಿವಿಧ ತಂಡಗಳೊಂದಿಗೆ ಸದ್ಭಕ್ತರು, ಮಹಿಳೆಯರು, ಮಕ್ಕಳ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಗವಂತನ ನಾಮ ಸಂಕೀರ್ತನೆ ಮೂಲಕ ಪುನೀತರಾದರು.
ಸಂಜೆಗತ್ತಲೆ ಬಳಿಕ ಮಂಗಳಾಚರಣೆ, ಮಹಾಪೂಜೆಗೆ ಮುನ್ನ ಸಾಹಿತಿ ನಾಗೇಶ್ ಕಾಲೂರು ಧಾರ್ಮಿಕ ಪ್ರವಚನ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿ ದ್ದರು. ರಾಮಾಂಜ ನೇಯ ಭಜನಾ ಮಂಡಳಿಯ ಮಹೇಶ್ ಸ್ವಾಗತಿಸಿದರು.