ನಾಪೆÉÇೀಕ್ಲು, ಡಿ. 9: ನಾಪೆÇೀಕ್ಲು ಪಿ.ಪಿ. ಫೌಂಡೇಷನ್ ವತಿಯಿಂದ ಹಳೇ ತಾಲೂಕಿನಿಂದ ನಾಪೆÉÇೀಕ್ಲು ಮಾರುಕಟ್ಟೆಯವರೆಗೆ ಪಟ್ಟಣದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸಲಾಯಿತು.

ಪಟ್ಟಣದ ನಿವಾಸಿ ದಿ. ಪಿ.ಪಿ. ಹಾಜಿ ಹೆಸರಿನಲ್ಲಿ ಅವರ ಕುಟುಂಬದ ಸದಸ್ಯರು ಪಿ.ಪಿ. ಫೌಂಡೇಶನ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಅವರ ಹೆಸರಿನಲ್ಲಿ ಶಿಕ್ಷಕರಿಗೆ ಸನ್ಮಾನ, ರಕ್ತದಾನ ಶಿಬಿರ, ಸ್ವಚ್ಛತಾ ಆಂದೋಲನ ಕಾರ್ಯಕ್ರಮಗಳೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಿ.ಪಿ. ಫೌಂಡೇಷನ್‍ನ ಸ್ಥಾಪಕ ಅಧ್ಯಕ್ಷ ಮೊಹಿದ್ದೀನ್ ಕುಟ್ಟಿ ಹಾಜಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲೀಂ ಹ್ಯಾರೀಸ್, ಅಬ್ದುಲ್ಲ, ಅಬ್ದುಲ್ ರಹೀಮಾನ್, ಅಹಮ್ಮದ್, ಪದಾಧಿಕಾರಿಗಳು ಭಾಗವಹಿಸಿದ್ದರು.