ಮಡಿಕೇರಿ, ಡಿ.9: ನಿನ್ನೆ ನಗರದಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕೆಲವರು ಅಡ್ಡಿಪಡಿಸಿದ್ದಲ್ಲದೆ ಬೆದರಿಕೆವೊಡ್ಡಿದ್ದಾಗಿ ಆರೋಪಿಸಿ, ವೇದಿಕೆಯ ರಾಜೀವ್ ಬೋಪಯ್ಯ ನಗರಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರತಿಯಾಗಿ ಕೊಡಗು ಅಭಿವೃದ್ಧಿಗೆ ಪೂರಕ ಯೋಜನೆ ಬೆಂಬಲಿತ ಹೋರಾಟದ ಪರವಾಗಿ ಕೆ.ಬಿ. ಬೋಪಣ್ಣ ದೂರು ಸಲ್ಲಿಸಿ, ತಮ್ಮ ಬೆಂಬಲಿಗರಿಗೆ ಕೆಟ್ಟ ಬೈಗುಳದೊಂದಿಗೆ ಬೆದರಿಕೆವೊಡ್ಡಿರುವದಾಗಿ ಆರೋಪಿಸಿದ್ದಾರೆ. ಉಭಯ ಕಡೆ ದೂರಿನ ಸಂಬಂಧ ಪೊಲೀಸರು ಕಾಯ್ದೆ 504, 143 ಹಾಗೂ 145ರ ಅನ್ವಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.