ವೀರಾಜಪೇಟೆ, ಡಿ, 8: ಇಂದಿನ ಸಮಾಜದಲ್ಲಿ ಮಹಿಳೆಯರು ಕೇವಲ ಗೃಹಿಣಿ ಮಾತ್ರವಲ್ಲ.ಉದ್ಯೋಗದಲ್ಲಿ ಪುರುಷರಂತೆ ಸಮಾನತೆಯನ್ನು ಹೊಂದುತ್ತಿದ್ದಾರೆ. ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದ ವಕೀಲೆ ಸಲ್ಮಾ ನ್ಯಾಯಾಧೀಶರ ಸ್ಥಾನಕ್ಕೆ ಆಯ್ಕೆಯಾಗಿರುವದು ಮಹಿಳಾ ವರ್ಗಕ್ಕೆ ಸಂದ ಗೌರವವಾಗಿದೆ ಎಂದು ವೀರಾಜಪೇಟೆಯ ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು.
ವೀರಾಜಪೇಟೆ ವಕೀಲರ ಸಂಘದಿಂದ ಇಲ್ಲಿನ ಸಮುಚ್ಚಯ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಧೀಶೆ ಸಲ್ಮಾ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಮಾ ಅವರು ಹುದ್ದೆಯ ಸೇವೆಯಲ್ಲಿ ಕರ್ತವ್ಯನಿಷ್ಠೆ, ದಕ್ಷತೆ ಇರಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ.