ಮಡಿಕೇರಿ, ನ. 25: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಚೇರಂಬಾಣೆಯ ಬೇಂಗ್ ನಾಡು ಕೊಡವ ಸಮಾಜ ಹಾಗೂ ಕೊಡವ ಸಮಾಜ ರಿಕ್ರಿಯೇಷನ್ ಮತ್ತು ಸ್ಪೋಟ್ರ್ಸ್ ಅಸೋಸಿಯೇಷನ್ನ ಸಹಭಾಗಿತ್ವದಲ್ಲಿ ತಲಾ ರೂ. 25 ಸಾವಿರಗಳ ಚೆಕ್ನ್ನು ವಿತರಿಸಲಾಯಿತು.
ಬೇಂಗ್ ನಾಡ್ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಏಳು ಮಂದಿ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ನ್ನು ಪ್ರಮುಖರು ವಿತರಿಸಿದರು. ಸಂತ್ರಸ್ತರಾದ ಚಂಡಿರ ರಾಜ ತಿಮ್ಮಯ್ಯ, ಚಂಡಿರ ಹರೀಶ ಪೊನ್ನಪ್ಪ, ಕೊಟ್ರಂಗಡ ಉತ್ತಪ್ಪ, ಮುಕ್ಕಾಟಿರ ತಂಗಮ್ಮ ಉತ್ತಪ್ಪ, ಮುಕ್ಕಾಟಿರ ತಾರ ಅಪ್ಪಣ, ಮಂಡೀರ ತಾರ ಪೆಮ್ಮಯ್ಯ ಹಾಗೂ ಚಿಮ್ಮಂಡ ಚಿಣ್ಣಪ್ಪ ಅವರುಗಳಿಗೆ ಚೆಕ್, ಪಾತ್ರೆ, ಕಂಬಳಿ ಸೇರಿದಂತೆ ಇತರ ಸಾಮಗ್ರಿಗಳನ್ನು ವಿತರಿಸಿದರು. ಕೊಡವ ಸಮಾಜ ರಿಕ್ರಿಯೇಷನ್ ಮತ್ತು ಸ್ಪೋಟ್ರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ, ಕೊಡವ ಸಮಾಜ ಹಾಗೂ ರಿಕ್ರಿಯೇಷನ್ ಕ್ಲಬ್ನ ಕಾರ್ಯದರ್ಶಿ ಬಾಚರಣಿಯಂಡ ಗಣಪತಿ, ಮಂದಪಂಡ ಮನೋಜ್ ಮಂದಣ್ಣ, ಕಲ್ಮಾಡಂಡ ವಾಸು ಉತ್ತಪ್ಪ, ಕಲ್ಮಾಡಂಡ ಗಣೇಶ್ ಕಾರ್ಯಪ್ಪ, ಕೊಟ್ಟುಕತ್ತೀರ ಪೆಮ್ಮಯ್ಯ, ಚಡಿಯಂಡ ಲವ, ತೇಲಪಂಡ ಲಕ್ಷ್ಮಿ, ಮಂಗೇರಿರ ರೀನಾ, ಕುಟ್ಟೇಟಿರ ಕುಮಾರಿ ಕುಂಞಪ್ಪ, ಅನಿತಾ ಗಣಪತಿ, ಪಟ್ಟಮಾಡ ತಿಮ್ಮಣ್ಣ, ಮಂದಪಂಡ ಮೇದಪ್ಪ, ಪಟ್ಟಮಾಡ ಹೇಮ್ ಮಾದಪ್ಪ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.