ಕುಶಾಲನಗರ, ನ. 25: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನದ ರಥೋತ್ಸವ ತಾ. 26 ರಂದು (ಇಂದು) ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಲಗ್ನದಲ್ಲಿ ರಥೋತ್ಸವ ನಡೆಯುವದು. ಬಳಿಕ ಅನ್ನದಾನ ನೆರವೇರಲಿದೆ. ರಥೋತ್ಸವ ಅಂಗವಾಗಿ ಭಾನುವಾರ ದೇವಾಲಯದ ಆವರಣದಲ್ಲಿ ಧ್ವಜಾರೋಹಣ ನಡೆಯಿತು. ಉತ್ಸವ ಅಂಗವಾಗಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿದರು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ನಿರ್ದೇಶಕರಾದ ಎಸ್.ಎನ್. ನರಸಿಂಹಮೂರ್ತಿ, ಜಿ.ಎಲ್.ನಾಗರಾಜ್, ಡಿ.ಅಪ್ಪಣ್ಣ, ಪ್ರಧಾನ ಅರ್ಚಕರಾದ ಆರ್.ಕೆ. ನಾಗೇಂದ್ರಬಾಬು ಮತ್ತು ಒಕ್ಕೂಟ ಸಮಿತಿಯ ಗೌರವಾಧ್ಯಕ್ಷರಾದ ಕೆ.ಆರ್. ಶಿವಾನಂದನ್, ಉಪಾಧ್ಯಕ್ಷರಾದ ರಾಮದಾಸ್, ಬಿ.ಎಲ್.ಸತ್ಯ, ಚಿಕ್ಕೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ದೇವಾಲಯ ಪ್ರತಿನಿಧಿಗಳಾದ ಎಂ.ಎಸ್. ಶಿವಾನಂದ, ಬಿ.ಆರ್. ನಾಗೇಂದ್ರಪ್ರಸಾದ್, ಗಣಪತಿ, ವಿ.ಪಿ.ನಾಗೇಶ್, ರೇಣುಕುಮಾರ್, ಅಮೃತ್‍ರಾಜ್ ಮತ್ತಿತರರು ಇದ್ದರು.