ಕೂಡಿಗೆ, ನ. 22: ಕೂಡಿಗೆಯ ಯೂಥ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕನ್ನಡ ರಾಜೋತ್ಸವದ ಪ್ರಯುಕ್ತ ದಿ. ಹೆಚ್.ಕೆ. ವಿಶ್ವನಾಥ (ವಿಶು) ಜ್ಞಾಪಕಾರ್ಥವಾಗಿ ಏರ್ಪಡಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಕೂಡಿಗೆಯ ಮೈದಾನದಲ್ಲಿ ನಡೆಯುತ್ತಿರುವ ವಾಲಿಬಾಲ್ ಪಂದ್ಯಾಟವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಉದ್ಘಾಟಿಸಿ, ಮಾತನಾಡಿ, ಕ್ರೀಡಾ ಜಿಲ್ಲೆ ಕೊಡಗಿನ ಕ್ರೀಡಾಪಟುಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಬೇಕು ಎಂದರು.
ಪಂದ್ಯಾಟಕ್ಕೆ ಯೂಥ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎ. ಪೀಟರ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ದಿ. ಹೆಚ್.ಕೆ. ವಿಶ್ವನಾಥ್ ಅವರ ಪುತ್ರ ಮಿಥುನ್ಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ಕುಮಾರ್, ಸದಸ್ಯರಾದ ಕೆ.ವೈ. ರವಿ, ಕೆ.ಬಿ. ರಾಮಚಂದ್ರ, ಆರ್.ಎಂ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕಿಶೋರ ಕೇಂದ್ರದ ಮುಖ್ಯಸ್ಥೆ ಉಮಾ, ಯೂಥ್ ಫ್ರೆಂಡ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಯುವರಾಜ್, ಸನ್ನಿ, ಅಜೀಜ್ ಸೇರಿದಂತೆ ನಿರ್ದೇಶಕರು ಇದ್ದರು.
ರಾಜ್ಯ ಮಟ್ಟದಲ್ಲಿ ಪ್ರದರ್ಶನ ನೀಡಿರುವ 8 ತಂಡಗಳು ಸೇರಿದಂತೆ ಜಿಲ್ಲೆಯ 6 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.