ಕುಶಾಲನಗರ, ನ. 22: ಕುಶಾಲನಗರ ಹೋಬಳಿ ವ್ಯಾಪ್ತಿಯ ನಂಜರಾಯಪಟ್ಟಣದ ಐತಿಹಾಸಿಕ, ಪಾರಂಪರಿಕ ಪ್ರಸಿದ್ಧ ನಂಜುಂಡೇಶ್ವರ ದೇವಾಲಯದಲ್ಲಿ ಕಾರ್ತಿಕ ಪೂಜಾ ದೀಪೋತ್ಸವ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಎನ್.ಕೆ. ಮೋಹನ್ ಕುಮಾರ್ ಕುಟುಂಬಸ್ಥರು ನಡೆಸಿಕೊಟ್ಟ ಪೂಜೋತ್ಸವದಲ್ಲಿ ಗ್ರಾಮದ ಹಲವು ಸುಮಂಗಲೆಯರು, ಭಕ್ತರು ಪಾಲ್ಗೊಂಡಿದ್ದರು.