ಮಡಿಕೇರಿ, ನ. 22: ಶಿಕ್ಷಕರು ಮಕ್ಕಳ ಮನೋವಿಕಾಸಕ್ಕೆ ಅನುಗುಣವಾಗಿ ತಮ್ಮ ಬೋಧನಾ ವಿಧಾನವನ್ನು ಉತ್ತಮಪಡಿಸಿಕೊಂಡು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಖಾತ್ರಿಪಡಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ನಗರದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಹಾಗೂ ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ‘ಟೀಚ್ ಫಾರ್ ಕೂರ್ಗ್’ ಅಭಿಯಾನದಡಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ವಿಜ್ಞಾನ, ಗಣಿತ ಹಾಗೂ ಸಮಾಜ ಐಚ್ಛಿಕ ವಿಷಯಗಳ ಶಿಕ್ಷಕರಿಗೆ ಇತ್ತೀಚೆಗೆ ಏರ್ಪಡಿಸಿದ್ದ ವಿಷಯ ಸಂಪದೀಕರಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಪ್ರಕಾರ ಪ್ರಸಕ್ತ ಸಾಲಿನಿಂದ ಕೇಂದ್ರದ ಸಿಬಿಎಸ್‍ಸಿ ಪಠ್ಯ ಕ್ರಮದ ಮಾದರಿಯಲ್ಲಿ ರಾಜ್ಯದಲ್ಲಿ 10ನೇ ತರಗತಿ (ಎಸ್‍ಎಸ್‍ಎಲ್‍ಸಿ) ಪಠ್ಯಕ್ರಮ ಪುರಸ್ಕøತಗೊಂಡಿರುವ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಕುರಿತಂತೆ ಬೋಧನಾ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ವಿಷಯ ಸಂಪದೀಕರಣ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ಸಂಪನ್ಮೂಲ ಶಿಕ್ಷಕರಿಂದ ಈ ತರಬೇತಿ ಕಾರ್ಯಾಗಾರ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ಬೋಧಕಾ ವೃಂದದ ಸಮನ್ವಯಾಧಿಕಾರಿ ಎಸ್. ಗಾಯತ್ರಿದೇವಿ ಮಾತನಾಡಿ, ಮಕ್ಕಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧಗೊಳಿಸುವ ಕುರಿತು ಜಿಲ್ಲೆಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲು ಆಗ್ಗಿಂದಾಗ್ಗೆ ತರಬೇತಿ ನಡೆಸಲಾಗುವದು ಎಂದರು.

ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ಸಂಪನ್ಮೂಲ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರನ್, ರಾಜೇಶ್ವರಿ ಕನನ್ (ಗಣಿತ ವಿಷಯ) ಎಸ್. ಗಾಯತ್ರಿದೇವಿ, ಪ್ರಿಯಾಂಕ, ರಬಿಯಾ (ಸಮಾಜ ವಿಷಯ), ಪುಷ್ಪಲತಾ, ನಮ್ರತಾ, ಅಗರ್‍ವಾಲ್ (ವಿಜ್ಞಾನ ವಿಷಯ) ವಿಷಯ ಸಂಪದೀಕರಣ ತರಬೇತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ, ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಬೆಟ್ಟನಾಯಕ್, ಶಿಕ್ಷಣಾಧಿಕಾರಿ ಕಾಶೀನಾಥ್, ಬಿ.ಆರ್.ಸಿ. ರಾಮಚಂದ್ರ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಕೆ.ಪಿ. ಕುಮಾರಸ್ವಾಮಿ, ಕಾರ್ಯದರ್ಶಿ ಮನೋಹರ ನಾಯಕ್, ಕೋಶಾಧಿಕಾರಿ ಹ್ಯಾರಿ ಮೋರಸ್, ಮುಖ್ಯ ಶಿಕ್ಷಕರಾಧ ಗುರುರಾಜ್, ಸಿಸ್ಟರ್, ರೋಜಾ, ಜಾನ್ಸ್‍ಸನ್, ತರಬೇತಿ ಸುಗಮಗಾರ ಟಿ.ಜಿ. ಪ್ರೇಮಕುಮಾರ್, ವಿಲ್‍ಫ್ರೆಡ್ ಕ್ರಾಸ್ತಾ, ಇಸಿಓಗಳಾದ ಎಂ.ಹೆಚ್. ಹರೀಶ್, ಮಾರುತಿ ಪಾಲ್ಗೊಂಡಿದ್ದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಷಯ, ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಗಣಿತ ವಿಷಯ ಹಾಗೂ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.