ಕುಶಾಲನಗರ, ನ. 22: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್‍ನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಜಮಾ ಖರ್ಚು ಓದಿ ಅಂಗೀಕರಿಸಲಾಯಿತು.
ಡಿಸೆಂಬರ್ 16 ರಂದು ನಡೆಯುವ ಮಂಡಲ ಪೂಜೋತ್ಸವ ಕಾರ್ಯಕ್ರಮದ ಸಂಬಂಧ ಉತ್ಸವ ಸಮಿತಿಗಳನ್ನು ನೇಮಿಸಲಾಯಿತು. ಡಿಸೆಂಬರ್ 14 ರಿಂದ ಪ್ರಾರಂಭಗೊಳ್ಳುವ ಮಂಡಲಪೂಜೆ 3 ದಿನಗಳ ಕಾಲ ನಡೆಯಲಿದೆ.
ದೇವಾಲಯದ ಭದ್ರತೆ ಹಿನ್ನೆಲೆ ಆವರಣದಲ್ಲಿ ಸಿಸಿ ಕ್ಯಾಮೆರ ಅಳವಡಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ದೇವಾಲಯ ಸಮಿತಿ ನೂತನ ಸದಸ್ಯರನ್ನಾಗಿ 15 ಮಂದಿಯನ್ನು ನಿಯೋಜನೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ದೇವಾಲಯ ಟ್ರಸ್ಟ್ ಅಧ್ಯಕ್ಷ ಗಣಪತಿ, ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯಯೋಜನೆ ರೂಪಿಸಲಿದೆ ಎಂದರು. ದೇವಸ್ಥಾನದ ಆವರಣದಲ್ಲಿ ಮತ್ತು ನದಿ ತಟದಲ್ಲಿ ಸ್ವಚ್ಛತೆಗೆ ಎಲ್ಲರೂ ಗಮನಹರಿಸುವದರೊಂದಿಗೆ ಭಕ್ತಾದಿಗಳು ಕೈಜೋಡಿಸಬೇಕೆಂದು ಕೋರಿದರು.
ಸಭೆಯಲ್ಲಿ ಕಾರ್ಯದರ್ಶಿ ಮಹೇಶ್ ನಾಲ್ವಡೆ, ಮಾಜಿ ಅಧ್ಯಕ್ಷ ಕೆ.ಆರ್. ಶಿವಾನಂದನ್, ಶ್ರೀನಿವಾಸರಾವ್, ಶ್ರೀನಿವಾಸ ಹತ್ವಾರ್, ಟ್ರಸ್ಟಿಗಳಾದ ಡಿ.ಆರ್. ಸೋಮಶೇಖರ್, ಪಿ.ಪಿ. ಸತ್ಯನಾರಾಯಣ, ಸುಬ್ರಮಣಿ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.