ಮಡಿಕೇರಿ, ನ. 22: ಬಸವಣ್ಣನವರ ಕಾಲದ ವಚನಗಳು ಇಂದಿನ ಸಮಾಜದ ತಿದ್ದುಪಡಿಗೆ ದಾರಿದೀಪವಾಗಿದ್ದು, 12ನೇ ಶತಮಾನದ ವಚನಗಳು ಇಂದು ಪುಸ್ತುತ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ ತಿಳಿಸಿದರು.

ಕುಶಾಲನಗರದ ಸೋಮೇಶ್ವರ ಬಡವಾಣೆಯ ನಾಗೇಗೌಡರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಶ್ರೀ ಚನ್ನಬಸವ ಸ್ವಾಮಿಜಿ ಧತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 12ನೇ ಶತ ಮಾನದಲ್ಲಿ ಅಂದಿನ ಯುಗ ಪುರುಷರು ಸಮಾಜದ ಉದ್ಧಾರಕ್ಕಾಗಿ ವಚನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಂಧಾಕಾರದ ಮೂಡ ನಂಬಿಕೆಗಳನ್ನು ತೊಲಗಿಸಲು ವಚನಗಳು ತುಂಬಾ ಪ್ರಭಾವ ಬೀರಿದೆ ಎಂದರು. ಮಣಜೂರು ಮಂಜುನಾಥ್ ಮಾತನಾಡಿ, ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಇಂದಿನ ಸಂಸತ್ತು ಏನು ಎಂಬದನ್ನು ಜಗತ್ತಿಗೆ ತೋರಿಸಿಕೊಟ್ಟವರು ಬಸವಣ್ಣನವರು. ಬಹುತೇಕ ಸಮಾಜದ ಕೊಳೆಯನ್ನು ಅಳಿಸಲು ವಚನಗಳು ಆಧಾರ ಸ್ತಂಭವಾಗಿದೆ ಎಂದರು. ಧತ್ತಿ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗಿ ಗುಡ್ಡಪ್ಪ ತಂಡದವರು ನಡೆಸಿಕೊಟ್ಟ ವಚನ, ತತ್ವಪದ, ಲಾವಣಿ ಜಾನಪದ ಗೀತೆಗಳು ಪ್ರೇಕ್ಷಕರ ಮನೆಸೂರೆ ಗೊಂಡವು, ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಹೆಚ್.ಎನ್. ನಾಗಾಚಾರಿ, ನಾಗೇಗೌಡ, ಎಂ.ಎನ್. ಮೂರ್ತಿ, ಟಿ.ಜಿ. ಪ್ರೇಂಕುಮಾರ್, ಪ್ರವೀಣ್, ಗೊಂದಿಬಸವನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ಎಸ್.ಕೆ. ಜಲಜಾಕ್ಷಿ, ಶಿಕ್ಷಕ ಶಶಿಕುಮಾರ್, ಪ್ರಕಾಶ್, ಮಂಜುನಾಥ್, ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.