ನಾಪೆÇೀಕ್ಲು, ನ. 22: ಸಮೀಪದ ಬಲ್ಲಮಾವಟಿ ಕೆನರಾ ಬ್ಯಾಂಕ್ ವತಿಯಿಂದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಇದರ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 5 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನೇತಾಜಿ ಪ್ರೌಢಶಾಲೆಯ ಇಬ್ಬರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತಲಾ ರೂ. 5,000 ಹಾಗೂ ನೆಲಜಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಲಾ 2,500 ರೂ. ಗಳ ಚೆಕ್ಕನ್ನು ಬ್ಯಾಂಕ್ ವ್ಯವಸ್ಥಾಪಕ ಕೆ.ಎಂ. ನಿತಿನ ವಿತರಿಸಿದರು.

ಈ ಸಂದರ್ಭ ಸಿಬ್ಬಂದಿಗಳಾದ ಶರೀನ್, ಜತೀನ್, ಪೌಲಸ್, ಸುಬ್ರಮಣಿ ಇದ್ದರು.