ಕೂಡಿಗೆ, ನ. 22: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.
ಕುಶಾಲನಗರ ಸಂಚಾರಿ ಪೆÇಲೀಸ್ ಠಾಣಾಧಿಕಾರಿ ಸೋಮೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗರಿಕರು ವಾಹನಗಳಲ್ಲಿ ಸಂಚರಿಸುವ ಸಂದರ್ಭ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಅಗತ್ಯತೆ ಇದೆ ಎಂದರಲ್ಲದೆ, ನಿಯಮ ಉಲ್ಲಂಘಿಸಿದಲ್ಲಿ ಆಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ವೈ, ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ, ಒಕ್ಕೂಟದ ಅಧ್ಯಕ್ಷ ನಾಗೇಶ್, ಗಿರೀಶ್, ಶರ್ಮಿಳಾ, ಸುಮತಿ, ರಾಧ, ಮಂದಾಕಿನಿ, ಶಾಂತಿ, ಸೇವಾ ಪ್ರತಿನಿಧಿಗಳಾದ ಸುನಂದ, ಸುವರ್ಣ, ಕುಸುಮ, ಹೇಮಲತಾ, ಶಶಿಕಲಾ, ಸುನೀತಾ, ರೇಣುಕಾ, ಸುಧಾ, ತರಬೇತಿ ಸಹಾಯಕರಾದ ಅನಿತಾ, ಪ್ರಿಯದರ್ಶಿನಿ ಹಾಗೂ ವಲಯದ ಸಹಾಯಕರು, ಒಕ್ಕೂಟದ ಪದಾಧಿಕಾರಿಗಳು, ಸಂಚಾರಿ ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು.