ಮಡಿಕೇರಿ, ನ. 21: ಶ್ರೀ ಮಠದ ನಿರ್ದೇಶನದಂತೆ ನಡೆದ ಅಮೃತ ಪಥ ಇತ್ತೀಚೆಗೆ ಬೆಳಿಗ್ಗೆ 8 ರಿಂದ 9 ರವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು ವಲಯ ಮುಳ್ಳೇರಿಯ ಮಂಡಲದಿಂದ ನಡೆಯಿತು.

ಮಕ್ಕಳಿಗೆ ಶ್ರೀ ಮಠದ ಯೋಜನೆ ಹಾಗೂ ಹಸುಗಳ ಮಹತ್ವದ ಬಗ್ಗೆ ತಿಳಿಸಲಾಯಿತು. ಪ್ರತಿ ತಿಂಗಳು ಈ ರೀತಿಯ ನೈರ್ಮಲಿಕರಣಕ್ಕೆ ಸಮಯ ಕೊಡಬೇಕೆಂದು ತಿಳಿಸಲಾಯಿತು

ಸೈಂಟ್ ಮೈಕಲ್‍ನ ಎನ್.ಸಿ.ಸಿ. ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ನೈರ್ಮಲಿಕರಣದಲ್ಲಿ ಒಟ್ಟು 78 ಜನರು ಭಾಗವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರು ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಪ್ರಕೃತಿಯ ಮಹತ್ವ ತಿಳಿಸಿದರು. ಕೊಡಗು ಹವ್ಯಕ ವಲಯದ ಕಾರ್ಯದರ್ಶಿ ಡಾ. ಎ.ಆರ್. ರಾಜಾರಾಂ ವಂದಿಸಿದರು. ಜಿ.ಆರ್. ನಾರಾಯಣ ರಾವ್, ಶ್ರಿಪತಿ, ಕುಸುಮ, ವನಮಾಲ ಭಟ್ ಉಪಸ್ಥಿತರಿದ್ದರು.