ಶನಿವಾರಸಂತೆ, ನ. 21: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ಸಂಘದ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಂಗ್ರಹಿಸಿದ ಹಣವನ್ನು ಇತ್ತೀಚೆಗೆ ಭೂ ಕುಸಿತದಿಂದ ಮನೆ ಕಳೆದುಕೊಂಡ ಮೇಘತ್ತಾಳು ಗ್ರಾಮದ 13 ಕುಟುಂಬಗಳಿಗೆ ತಲಾ ರೂಪಾಯಿ ಮೂರು ಸಾವಿರದಂತೆ ವಿತರಿಸಲಾಯಿತು.

ಈ ಸಂದರ್ಭ ಸಂಘದ ಎ.ಎಸ್. ಪುಟ್ಟಸ್ವಾಮಿ, ಎಸ್.ಬಿ. ನಂಜಪ್ಪ,ಸಿ, ಎಲ್. ಸುಬ್ಬಯ್ಯ, ಟಿ.ಎ. ಮಹೇಶ್ವರಪ್ಪ, ಡಿ.ಬಿ. ಸೊಮಪ್ಪ ಮುಂತಾದವರಿದ್ದರು.