ಮಡಿಕೇರಿ, ನ. 21: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಡಿ ತಾ. 18 ರಂದು ಜಿಲ್ಲಾಮಟ್ಟದ ಜಿಲ್ಲಾ ಪುರಸ್ಕಾರ (ತೃತೀಯ ಸೋಪಾನ) ಪರೀಕ್ಷೆಯನ್ನು ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಸಲಾಯಿತು.
ಧ್ವಜಾರೋಹಣ ಮಾಡುವದರ ಮೂಲಕ ಜಿಲ್ಲಾ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ, ಪರೀಕ್ಷೆಗೆ ಚಾಲನೆ ನೀಡಿ ಸೇರಿದ ಎಲ್ಲಾ ಸೌಟ್ಸ್ ಮತ್ತು ಗೈಡ್ಸ್ ಕಬ್ಸ್ ಮತ್ತು ಬುಲ್‍ಬುಲ್ಸ್‍ಗಳಿಗೆ ಶುಭ ಹಾರೈಸಿದರು.
ಸುಮಾರು 340 ವಿದ್ಯಾರ್ಥಿಗಳು ಆಗಮಿಸಿದ್ದು ಸ್ಕೌಟ್ಸ್ ವಿಭಾಗದ ಜವಾಬ್ದಾರಿಯನ್ನು ರಂಜಿತ್ ಕೆ.ಯು ಅವರು ವಹಿಸಿದ್ದರು. ಗೈಡ್ಸ್ ವಿಭಾಗದ ಜವಾಬ್ದಾರಿಯನ್ನು ಸಗಾಯ ಮೇರಿ ಅವರು ವಹಿಸಿದ್ದರು. ಬುಲ್‍ಬುಲ್ ವಿಭಾಗದ ಜವಾಬ್ದಾರಿಯನ್ನು ಶಾಲಿನಿ, ಕಬ್ ವಿಭಾಗದ ಜವಾಬ್ದಾರಿಯನ್ನು ರತಿ ಕುಮಾರಿ ವಹಿಸಿದ್ದರು. ಈ ಸಂದರ್ಭ ಹಿಮಾಲಯ ವುಡ್ ಬ್ಯಾಡ್ಜ್ ಪಡೆದಿರುವ ಶಿಕ್ಷಕ ಶಿಕ್ಷಕಿಯರು ಸಹಾಯಕರಾಗಿ ಆಗಮಿಸಿದ್ದರು. ಅವರ ಜೊತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಗಮಿಸಿರುವ ಗೈಡ್ಸ್, ಸ್ಕೌಟ್ಸ್‍ಗಳು ಸಹಾಯ ಮಾಡಿರುವರು.