ಮಡಿಕೇರಿ, ನ. 20: ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ-ವೀಕ್ಷಕರ ಸಂಘ ಕೊಡಗು ವೃತ್ತ ಇವರ ಸಭೆ ಮಡಿಕೇರಿ ಅರಣ್ಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಸಂಘದ ಅಧ್ಯಕ್ಷರಾಗಿ ಪಿ.ಆರ್. ಜಗನ್ನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚೌಡಪ್ಪ ನಾಯ್ಕ, ಕಾರ್ಯದರ್ಶಿಯಾಗಿ ಯಂ.ಆರ್. ಸಂದೇಶ್, ಖಜಾಂಚಿಯಾಗಿ ಎಸ್. ನಾಗರಾಜ್, ಜಂಟಿ ಕಾರ್ಯದರ್ಶಿ ಯಾಗಿ ಎಂ.ಎಸ್. ಪುನೀತ್, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದರಾಜು, ಸಚಿನ್, ಯಂ.ಸಿ. ವಾಸುದೇವ್, ಕಾರ್ತಿಕ್, ಶಿವರಾಜ್ ಸಂದೂರು ಹಾಗೂ ಕಾಳೇಗೌಡ ಇವರನ್ನು ಆಯ್ಕೆ ಮಾಡಲಾಯಿತು.