ಮಡಿಕೇರಿ, ನ. 20: ಮಡಿಕೇರಿ ನಗರ ಗೌಡ ಹುತ್ರಿ ಸಮಿತಿ ವತಿಯಿಂದ 10ನೇ ವರ್ಷದ ಹುತ್ರಿ ಹಬ್ಬವನ್ನು ತಾ. 23 ರಂದು ಕೊಡಗು ಗೌಡ ವಿದ್ಯಾ ಸಂಘ ಮಡಿಕೇರಿಯ ಸಭಾಂಗಣದಲ್ಲಿ ಆಚರಿಸಲಾಗುವದು.

ರಾತ್ರಿ 7.30 ಗಂಟೆಗೆ ನೆರೆ ಕಟ್ಟುವದು, 8.30 ಗಂಟೆಗೆ ಕದಿರು ತೆಗೆಯುವದು ಮತ್ತು 9.30 ಗಂಟೆಗೆ ನೆರೆದಿದ್ದ ಸರ್ವರಿಗೂ ಲಘು ಉಪಹಾರ ನೀಡಿ, ನೆರೆ ಕಟ್ಟಿದ ಕದಿರನ್ನು ವಿತರಿಸಲಾಗುವದು ಎಂದು ಸಮಿತಿ ಅಧ್ಯಕ್ಷ ಪರಿವಾರ ಅಪ್ಪಾಜಿ ತಿಳಿಸಿದ್ದಾರೆ.