ಮಡಿಕೇರಿ, ನ. 21: ಪ್ರಸಕ್ತ (2018-19) ಸಾಲಿನ ವಿಶ್ವ ವಿಕಲಚೇತನ ದಿನಾಚರಣೆ ಪ್ರಯುಕ್ತ ತಾ. 29 ರಂದು ನಗರದ ಗಾಂಧಿ ಮೈದಾನದಲ್ಲಿ ತಾಲೂಕು ಮಟ್ಟದ ವಿಕಲಚೇತನರ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿಕಲಚೇತನರು ಭಾಗವಹಿಸಬೇಕಾಗಿ ಜಿಲ್ಲಾ ವಿಕಲಚೇತನ ಸಂಘದ ಅಧ್ಯಕ್ಷ ಜೆ.ಎ. ಮಹೇಶ್ವರ ಹಾಗೂ ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೋರಿದ್ದಾರೆ.