ಗುಡ್ಡೆಹೊಸೂರು, ನ. 20: ಗುಡ್ಡೆಹೊಸೂರಿನಿಂದ ಸಿದ್ದಾಪುರ ರಸ್ತೆ ನೆಲ್ಲಿಹುದಿಕೇರಿ ತನಕ ರಸ್ತೆಯಲ್ಲಿ ಅನೇಕ ಕಡೆ ಭಾರಿಗುಂಡಿಗಳು ಏರ್ಪಟ್ಟಿದ್ದು, ವಾಹನ ಸಂಚಾರ ಮಾಡಲು ಪರದಾಡುವಂತಾಗಿದೆ. ಅಲ್ಲದೆ ಬೈಕ್ ಸವಾರರು ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ತಮ್ಮ ಕೈ ಕಾಲುಗಳನ್ನು ಮುರಿದುಕೊಂಡ ಪ್ರಸಂಗಗಳು ಪ್ರತಿನಿತ್ಯ ಕಾಣಬಹುದಾಗಿದೆ. ಆದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆಯಲ್ಲಿರುವ ಗುಂಡಿಗಳನ್ನಾದರೂ ಮುಚ್ಚಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.