ಗೋಣಿಕೊಪ್ಪಲು, ನ. 21: ಗೋಣಿಕೊಪ್ಪಲು ಗಜ ಮುಖ ಸ್ವಸಹಾಯ ಸಂಘದ ವತಿಯಿಂದ ಮೂರನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಇತ್ತೀಚೆಗೆ ಕಳತ್ಮಾಡುವಿನ ಗ್ರಾಮ ದೇವಸ್ಥಾನಗಳಲೊಂದಾದ ಐಯ್ಯಪ್ಪ ದೇವಸ್ಥಾನದ ಸುತ್ತ ಮುತ್ತ ಬೆಳೆದಿದ್ದ ಕಾಡನ್ನು ಕಡಿದು ಸ್ವಚ್ಛಗೊಳಿಸಲಾಯಿತು.

ಸಂಘದ ಅಧ್ಯಕ್ಷ ಹೆಚ್.ಡಿ. ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ಹೆಚ್.ಬಿ. ಬೋಪಣ್ಣ, ಸಲಹೆಗಾರ ವಿ.ಆರ್. ಮಧು, ಖಜಾಂಚಿ ಎಂ. ಅನಂತ್‍ಕುಮಾರ್, ಸದಸ್ಯರಾದ ಹೆಚ್.ಪಿ. ಮಹದೇವ,ಕೆ.ಸಿ. ಚೇತನ್, ಮಹೇಶ್ ಇನ್ನಿತರರು ಹಾಜರಿದ್ದರು.