ಪೊನ್ನಂಪೇಟೆ, ನ. 19: ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ‘ಹಿರಿಯ ವಕೀಲ’ ಎಂದು ಘೋಷಿಸಿದೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಹೈಕೋರ್ಟ್ ಒಟ್ಟು 18 ಜನ ಹೈಕೋರ್ಟ್ ವಕೀಲರನ್ನು ‘ಹಿರಿಯ ವಕೀಲ’ರನ್ನಾಗಿ ಘೋಷಿಸಿದ್ದು, ಈ ಪೈಕಿ ಎ.ಎಸ್. ಪೊನ್ನಣ್ಣ ಕೂಡ ಒಬ್ಬರಾಗಿದ್ದಾರೆ.