ಭಾಗಮಂಡಲ, ನ. 19: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಮಾತೆ ಶ್ರೀ ಕಾವೇರಿಗೆ ತೊಡಿಸಲೆಂದು ತಲಕಾವೇರಿ ತಕ್ಕಮುಖ್ಯಸ್ಥರ ಸುಪರ್ದಿಗೆ ನೀಡಲಾಗಿದ್ದ ಚಿನ್ನಾಭರಣಗಳನ್ನು ಇಂದು ಆಡಳಿತದ ಸುಪರ್ದಿಗೆ ನೀಡಲಾಯಿತು. ಒಂದು ತಿಂಗಳ ಕಾಲದ ತುಲಾ ಸಂಕ್ರಮಣ ಜಾತ್ರೆ ಕೊನೆಗೊಂಡಿದ್ದು, ಇಂದು ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ ಹಾಗೂ ತಕ್ಕರು ಆಭರಣವನ್ನು ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಖಾರಿ ಜಗದೀಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.