ನಾಪೆÇೀಕ್ಲು, ನ. 19: ಮೈತಾಡಿ ಗ್ರಾಮದ ಐಚೆಟ್ಟಿರ ಬೋಪಯ್ಯ ಅವರ ಲೈನ್ ಮನೆಯಲ್ಲಿ ವಾಸವಿದ್ದ ಸಹಬುದ್ದೀನ್ ಅವರ ಪತ್ನಿ ಅಕ್ಲಿಮ ಅವರನ್ನು ಹೆರಿಗೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೂರ್ನಾಡು ಸಮೀಪದ ಬೇತ್ರಿ ಬಳಿ 108 ವಾಹನದಲ್ಲಿಯೇ ಗಂಡು ಮಗುವಿಗೆ ಜನ್ಮವಿತ್ತ ಘಟನೆ ನಡೆದಿದೆ.
ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಅವರನ್ನು ಮೂರ್ನಾಡು ಆಸ್ಪತ್ರೆಗೆ ದಾಖಲಿಸಲಾಯಿತು. ಶುಶ್ರೂಷಕ ಕುದುಪಜೆ ಡಿ.ರಂಜಿತ್ ಹೆರಿಗೆ ಕಾರ್ಯ ನೆರವೇರಿಸಿದ್ದು, ಇವರೊಂದಿಗೆ ಚಾಲಕ ತೊತ್ತಿಯನ ಎಂ.ಕಿರಣ್, ಸಂಬಂಧಿಕರು ಸಹಕರಿಸಿದರು.