ಮಡಿಕೇರಿ, ನ. 19: ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 20 ರಂದು (ಇಂದು) ಸಂಜೆ 7 ಗಂಟೆಗೆ ಉತ್ಥಾನ ದ್ವಾದಶಿಯೊಂದಿಗೆ ತುಳಸಿ ಪೂಜೆ ಹಾಗೂ ಗೋಪೂಜೆ ನಡೆಯಲಿದೆ.

ತಾ. 23 ರಂದು ಕಾರ್ತಿಕ ಮಾಸದ ತೆಪೋತ್ಸವ ಹಾಗೂ ದಟ್ಟೋತ್ಸವವು ಸಂಜೆ 6 ಗಂಟೆ ಬಳಿಕ ವಿಶೇಷ ಮಹಾಪೂಜೆಯೊಂದಿಗೆ ನೆರವೇರಲಿದೆ. ಅದೇ ದಿವಸ ರಾತ್ರಿ ಹುತ್ತರಿ ಕದಿರು ತೆಗೆಯುವದು, ರಾತ್ರಿ 8.30ಕ್ಕೆ ಮತ್ತು ತಾ. 24 ರಂದು ಕೋಟೆ ಆವರಣದಲ್ಲಿ ಅಪರಾಹ್ನ 3 ಗಂಟೆಗೆ ಹುತ್ತರಿ ಕೋಲಾಟ ಜರುಗುವದು ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.