ಕೂಡಿಗೆ, ನ. 19 : ಕೂಡಿಗೆಯ ಯೂಥ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕನ್ನಡ ರಾಜೋತ್ಸವದ ಪ್ರಯುಕ್ತ ದಿ. ಹೆಚ್,ಕೆ, ವಿಶ್ವನಾಥ (ವಿಶು) ಇವರ ಜ್ಞಾಪಕಾರ್ಥವಾಗಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸುನೀಲ್‍ಶೆಟ್ಟಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.

ಪ್ರಥಮ ಸ್ಥಾನ ಗಳಿಸಿದ ಸುನೀಲ್‍ಶೆಟ್ಟಿ ತಂಡಕ್ಕೆ ರೂ. 33,333 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಬೆಂಗಳೂರಿನ ನವೀನ್ ತಂಡಕ್ಕೆ ರೂ. 22,222 ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದು ಬೆಂಗಳೂರಿನ ಡಿವೈಎಸ್‍ಎಸ್ ತಂಡಕ್ಕೆ ರೂ. 11,111 ಹಾಗೂ ಟ್ರೋಫಿ, ಚತುರ್ಥ ಸ್ಥಾನ ಪಡೆದುಕೊಂಡ ಕೇರಳ ಟೈಗರ್ಸ್ ತಂಡವು ರೂ. 6,666 ಮತ್ತು ಟ್ರೋಫಿಯನ್ನು ನೀಡಲಾಯಿತು.

ಪಂದ್ಯಾವಳಿಯ ತೀರ್ಪುಗಾರ ರಾಗಿ ಕರ್ನಾಟಕ ರಾಜ್ಯ ವಾಲಿಬಾಲ್ ಫೆಡರೇಷನ್‍ನ ರಾಕೇಶ್, ರಾಜೇಶ್ ಕಾರ್ಯನಿರ್ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎ.ಪೀಟರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿದರು. ಈ ಸಂದರ್ಭ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಹೈದರಾಲಿ ಮತ್ತು ಏರೋಬಿಕ್ಸ್ ಚಿನ್ನದ ಪದಕ ವಿಜೇತೆ ಯಶಸ್ವಿನಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರಾದ ಕೆ.ವೈ.ರವಿ, ಕೆ.ಬಿ.ರಾಮಚಂದ್ರ, ರಾಜ್ಯಮಟ್ಟದ ವಾಲಿಬಾಲ್ ಪಟುಗಳಾದ ಹೆಚ್.ಎಸ್. ಸೋಮಶೇಖರ್, ಅಗಸ್ಟಿನ್ ಪಿಂಟೋ, ಗುತ್ತಿಗೆದಾರ ಪವನ್‍ಕುಮಾರ್, ಮಂಜುನಾಥ್, ಐಎನ್‍ಟಿಯೂಸಿ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್, ಮಹಮ್ಮದ್, ಹೈದರಾಲಿ ಸೇರಿದಂತೆ ಅಸೋಸಿಯೇಷನ್‍ನ ನಿರ್ದೇಶಕರು ಹಾಗೂ ದಾನಿಗಳು ಇದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಸನ್ನಿ, ಕೆ.ಎ.ಪೀಟರ್ ನಿರ್ವಹಿಸಿದರು.