ಸೋಮವಾರಪೇಟೆ, ನ.15: ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಐಗೂರು &divound;ವಾಸಿ ವೆಂಕಪ್ಪ ಎಂಬವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಯಡವಾರೆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ, ಯಡವನಾಡು ಜಂಕ್ಷನ್ ಬಳಿ ರವಿ ಎಂಬಾತ ಕಾರನ್ನು ಅಡ್ಡಗಟ್ಟಿ ವಿನಾಕಾರಣ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. ತಲ್ತರೆಶೆಟ್ಟಳ್ಳಿ ಗ್ರಾಮದ ಈರಪ್ಪ ಎಂಬವರ ಮೇಲೆ ಪ್ರಜ್ವಲ್ ಎಂಬಾತ ಹಲ್ಲೆ ನಡೆಸಿರುವ ಬಗ್ಗೆ ಮತ್ತೊಂದು ದೂರು ನೀಡಲಾಗಿದೆ. ನೀರು ಬಿಡುವ ವಿಚಾರಕ್ಕೆ ಜಗಳವಾಡಿ ಹಲ್ಲೆ ನಡೆಸಿರುವದಾಗಿ ಈರಪ್ಪ ಅವರು ದೂರು &divound;ೀಡಿದ್ದಾರೆ.